ನ್ಯೂಯಾರ್ಕ್‌ನ ಕ್ವೀನ್ಸ್ ಕೌಂಟಿಯ ನೈಟ್‌ಕ್ಲಬ್ ಹೊರಗಿನ ದೃಶ್ಯ
ಚಿತ್ರಕೃಪೆ: X / @nicksortor
ನ್ಯೂಯಾರ್ಕ್: ಇಲ್ಲಿನ ಕ್ವೀನ್ಸ್ ಕೌಂಟಿಯ ನೈಟ್‌ಕ್ಲಬ್ ಹೊರಗೆ ನಡೆದ ಗುಂಡಿನ ದಾಳಿ ನಡೆದಿದ್ದು ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು 'ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ. ಮೂಲಗಳು ಹಾಗೂ ಪೊಲೀಸರು ಮಾಹಿತಿ ನೀಡಿರುವುದಾಗಿ ಉಲ್ಲೇಖಿಸಿದೆ.
ನ್ಯೂಯಾರ್ಕ್ ನಗರ ಸಮೀಪದ ಜಮೈಕಾದಲ್ಲಿರುವ ಅಮಝುರಾ ನೈಟ್‌ಕ್ಲಬ್ ಸಮೀಪ ಬುಧವಾರ ರಾತ್ರಿ 11.20ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ದಾಳಿ ನಡೆದ ಹೊತ್ತಲ್ಲಿ 80ಕ್ಕೂ ಹೆಚ್ಚು ಜನರು ಸ್ಥಳದಲ್ಲಿದ್ದರು ಎನ್ನಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರ ಪ್ರಾಣಕ್ಕೂ ಅಪಾಯವಿಲ್ಲ ಎಂದು ನ್ಯೂಯಾರ್ಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತ್ಯ ನಡೆಸಿದವರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಹೊಸ ವರ್ಷದ ದಿನವೇ ಲೂಸಿಯಾನಾ ರಾಜ್ಯದ ನ್ಯೂ ಅರ್ಲಿನ್ಸ್‌ನಲ್ಲಿ ನಡೆದ ಟ್ರಕ್ ದಾಳಿ ಮತ್ತು ನೆವಡಾದ ಲಾಸ್ ವೇಗಾಸ್‌ನಲ್ಲಿ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟದ ಬೆನ್ನಲ್ಲೇ, ನ್ಯೂಯಾರ್ಕ್‌ನಲ್ಲಿ ನಡೆದಿರುವ ಗುಂಡಿನ ದಾಳಿ, ಆತಂಕ ಸೃಷ್ಟಿಸಿದೆ.
ನ್ಯೂ ಅರ್ಲಿನ್ಸ್‌ನಲ್ಲಿ ಜನಸಂದಣಿ ಮೇಲೆ ಟ್ರಕ್ ಹರಿದ ಪರಿಣಾಮ 15 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೆವಡಾದಲ್ಲಿ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟದಿಂದಾಗಿ ಒಬ್ಬ ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.