ಅಲ್–ಜಜೀರಾ
- ರಾಯಿಟರ್ಸ್ ಚಿತ್ರ
ರಾಮಲ್ಲಾ (ಪ್ಯಾಲೆಸ್ಟೀನ್): ಕತಾರ್ ಮೂಲದ ಸುದ್ದಿ ಸಂಸ್ಥೆ ‘ಅಲ್ ಜಜೀರಾ’ ಪ್ರಸಾರ ಸ್ಥಗಿತಗೊಳಿಸುವಂತೆ ಪ್ಯಾಲೆಸ್ಟೀನಿ ಅಧಿಕಾರಿಗಳು ಆದೇಶಿಸಿದ್ದಾರೆ. ಚಾನಲ್ ಪ್ರಚೋದನೆ ನೀಡುತ್ತಿದೆ ಎಂದು ಪ್ಯಾಲೆಸ್ಟೀನ್ ಆರೋಪಿಸಿದ್ದು, ಅದರ ನಡವಳಿಕೆಯನ್ನು ಇಸ್ರೇಲ್ ಆಚರಣೆಗಳಿಗೆ ಹೋಲಿಕೆ ಮಾಡಿದೆ.
ಈಗಾಗಲೇ ಅಲ್ ಜಜೀರಾಗೆ ಇಸ್ರೇಲ್‌ನ ಬೆಂಜಮಿನ್ ನೇತಾನ್ಯಾಹು ಸರ್ಕಾರ ನಿಷೇಧ ಹೇರಿದೆ.
ಅಲ್ ಜಜೀರಾದ ವರದಿಯ ಬಗ್ಗೆ ಪ್ಯಾಲೆಸ್ಟೀನಿ ಪತ್ರಕರ್ತರು ನೀಡಿದ ದೂರಿನ ಅನ್ವಯ ಈ ನಿರ್ಧಾರ ತೆಗೆದುಕೊಂಡಿದೆ. ಅಲ್ ಜಜೀರಾ ಪತ್ರಿಕೋದ್ಯಮ ಕನಿಷ್ಠ ಶಿಷ್ಟಾಚಾರಗಳು ಪಾಲಿಸುವವರೆಗೂ ಈ ನಿಷೇಧ ಜಾರಿಯಲ್ಲಿರಲಿದೆ ಎಂದು ಪ್ಯಾಲೆಸ್ಟೀನ್ ಹೇಳಿದೆ.
‘ತಪ್ಪು ಮಾಹಿತಿಯನ್ನು ತಡೆಗಟ್ಟುವುದು, ಹಿಂಸಾಚಾರದ ವೈಭವೀಕರಣ ನಿಷೇಧಿಸುವುದು ಮತ್ತು ಸಶಸ್ತ್ರ ದಂಗೆಗೆ ಪ್ರಚೋದನೆಯನ್ನು ಕೊನೆಗೊಳಿಸುವುದು ಸೇರಿದಂತೆ ಮೂಲಭೂತ ಮಾಧ್ಯಮ ನೀತಿಗಳಿಗೆ ಅನುಗುಣವಾಗಿ ಅಲ್ ಜಜೀರಾ ಕಾರ್ಯನಿರ್ವಹಿಸುವವರೆಗೆ ನಿಷೇಧ ಅನ್ವಯವಾಗಲಿದೆ ಎಂದು ಪ್ಯಾಲೆಸ್ಟೀನ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.