ADVERTISEMENT

ಮರಿಯಪೋಲ್ ಉಕ್ಕಿನ ಘಟಕದಿಂದ ನಾಗರಿಕರ ಸ್ಥಳಾಂತರಕ್ಕೆ ಪುಟಿನ್ ಒಪ್ಪಿಗೆ

ರಾಯಿಟರ್ಸ್
Published 27 ಏಪ್ರಿಲ್ 2022, 2:23 IST
Last Updated 27 ಏಪ್ರಿಲ್ 2022, 2:23 IST
   

ದಕ್ಷಿಣ ಉಕ್ರೇನ್‌ನ ಮರಿಯಪೋಲ್‌ನಲ್ಲಿರುವ ಅಜೋವ್‌ಸ್ಟಾಲ್‌ ಉಕ್ಕಿನ ಘಟಕದಲ್ಲಿ ಸಿಲುಕಿರುವ ನಾಗರಿಕರ ಸ್ಥಳಾಂತರಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಒಪ್ಪಿಗೆ ನೀಡಿದ್ದಾರೆ.

ವಿಶ್ವಸಂಸ್ಥೆ ಮತ್ತು ರೆಡ್‌ ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿ ಸಹಯೋಗದಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ.

ರಷ್ಯಾದ ಮಾಸ್ಕೋದಲ್ಲಿ ಪುಟಿನ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಸಭೆ ನಡೆಸಿದ್ದು, ನಾಗರಿಕರ ಸ್ಥಳಾಂತರಕ್ಕೆ ಪುಟಿನ್ ಸಮ್ಮತಿಸಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಸಭೆಯ ಬಳಿಕ ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯೂರಿಕ್ ಅವರು ಹೇಳಿಕೆ ನೀಡಿದ್ದು, ರಷ್ಯಾ ರಕ್ಷಣಾ ಸಚಿವಾಲಯದ ಸಮ್ಮತಿಯೊಂದಿಗೆ, ಅಜೋವ್‌ಸ್ಟಾಲ್‌ ಉಕ್ಕಿನ ಘಟಕದಿಂದ ಜನರನ್ನು ಸ್ಥಳಾಂತರಿಸಲಾಗುತ್ತದೆ. ರಕ್ಷಣಾ ಕಾರ್ಯಕ್ಕೆ ರಷ್ಯಾ ಪಡೆಗಳು ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.