ಕೀವ್: ‘ನಮ್ಮ ದೇಶದ ಮೇಲಿನ ದಾಳಿಗೆ ಬಳಸಲಾದ ರಷ್ಯಾದ ಡ್ರೋನ್‌ಗಳಲ್ಲಿ ಭಾರತದ ಬಿಡಿಭಾಗಗಳು ಪತ್ತೆಯಾಗಿವೆ’ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಸಿಬ್ಬಂದಿ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ತಿಳಿಸಿದ್ದಾರೆ.
ರಷ್ಯಾವು ಈ ಡ್ರೋನ್‌ಗಳನ್ನು ನಾಗರಿಕರ ವಿರುದ್ಧದ ದಾಳಿಗಳಲ್ಲಿ ಬಳಸಿದೆ ಎಂದು ಯೆರ್ಮಾಕ್ ಹೇಳಿದ್ದಾರೆ.
ಈಚೆಗೆ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಭಾರತವು ಪರಿಣಾಮಕಾರಿಯಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ನಿಕಟವರ್ತಿ ಆರೋಪಿಸಿದ್ದರು.
ಭಾರತವು ಮಾಸ್ಕೊದಿಂದ ತೈಲ ಖರೀದಿಸುವ ಮೂಲಕ ರಷ್ಯಾಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಅವರು ದೂರಿದ್ದರು.
‘ರಷ್ಯಾದಿಂದ ತೈಲ ಖರೀದಿ ವಿಷಯದಲ್ಲಿ ಭಾರತವು ಚೀನಾದ ಜತೆಗೆ ಸಂಬಂಧ ಹೊಂದಿದೆ ಎಂಬುದು ಆಘಾತಕಾರಿ ಮತ್ತು ಆಶ್ಚರ್ಯದ ಸಂಗತಿ’ ಎಂದು ಶ್ವೇತಭವನದ ಉಪ ಮುಖ್ಯಸ್ಥ ಮತ್ತು ಟ್ರಂಪ್ ಅವರ ನಿಕಟವರ್ತಿಯೂ ಆದ ಸ್ಟೀಫನ್ ಮಿಲ್ಲರ್ ‘ಫಾಕ್ಸ್ ನ್ಯೂಸ್’ಗೆ ತಿಳಿಸಿದ್ದರು.
‘ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಭಾರತ ಮುಂದುವರಿಸುವುದು ಸ್ವೀಕಾರಾರ್ಹವಲ್ಲ ಎಂದು ಟ್ರಂಪ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದೂ ಅವರು ಹೇಳಿದ್ದರು. ಮಿಲ್ಲರ್ ಅವರ ಹೇಳಿಕೆ ಕುರಿತು, ವಾಷಿಂಗ್ಟನ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.