ADVERTISEMENT

ಮಾಸ್ಕೊದಲ್ಲಿ ಶಾಂತಿ ಸಭೆ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಪ್ರಸ್ತಾವ

ಏಜೆನ್ಸೀಸ್
Published 19 ಆಗಸ್ಟ್ 2025, 15:59 IST
Last Updated 19 ಆಗಸ್ಟ್ 2025, 15:59 IST
ವ್ಲಾದಿಮಿರ್‌ ಪುಟಿನ್
ವ್ಲಾದಿಮಿರ್‌ ಪುಟಿನ್   

ಕೀವ್‌: ಉಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್‌ಸ್ಕಿ ಅವರೊಂದಿಗಿನ ಶಾಂತಿ ಸಭೆ ಮಾಸ್ಕೊದಲ್ಲಿ ಆಯೋಜಿಸಬೇಕು ಎಂಬ ಪ್ರಸ್ತಾವವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮುಂದಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದೂರವಾಣಿ ಮೂಲಕ ನಡೆಸಿದ ಮಾತುಕತೆ ವೇಳೆ ಪುಟಿನ್‌ ಪ್ರಸ್ತಾವ ಮುಂದಿಟ್ಟರು’ ಎಂದು ಉಭಯ ನಾಯಕರ ನಡುವಿನ ದೂರವಾಣಿ ಸಂಭಾಷಣೆ ಬಗ್ಗೆ ಮಾಹಿತಿ ಇರುವ ಮೂರು ಮೂಲಗಳು ತಿಳಿಸಿವೆ.

‘ಪುಟಿನ್‌ ಅವರ ಈ ಪ್ರಸ್ತಾವಕ್ಕೆ ಝೆಲೆನ್‌ಸ್ಕಿ ಒಪ್ಪಿಗೆ ನೀಡಲಿಲ್ಲ’ ಎಂದು ಒಂದು ಮೂಲ ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.