ADVERTISEMENT

ಆಕ್ರಮಣ ಮಾಡಿದರೆ ಚೀನಾ ವಿರುದ್ಧ ವಿಶ್ವದ ರಾಷ್ಟ್ರಗಳು ನಿರ್ಬಂಧ ಹೇರಲಿವೆ: ತೈವಾನ್

ರಾಯಿಟರ್ಸ್
Published 7 ಮೇ 2022, 7:20 IST
Last Updated 7 ಮೇ 2022, 7:20 IST
ಉಕ್ರೇನ್ ಬಳಿಯ ತನ್ನ ಭೂಪ್ರದೇಶದಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿರುವ ರಷ್ಯಾ
ಉಕ್ರೇನ್ ಬಳಿಯ ತನ್ನ ಭೂಪ್ರದೇಶದಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿರುವ ರಷ್ಯಾ   

ತೈಪೆ: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿರುವಂತೆ,ಒಂದು ವೇಳೆ ಚೀನಾ ತಮ್ಮ ಮೇಲೆ ಆಕ್ರಮಣ ಮಾಡಿದರೆ ವಿಶ್ವದ ರಾಷ್ಟ್ರಗಳು ಕ್ರಮ ಕೈಗೊಳ್ಳಲಿವೆಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಶನಿವಾರ ಹೇಳಿದ್ದಾರೆ.

ಉಕ್ರೇನ್‌ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿವೆ. ತೈವಾನ್‌ ಕೂಡ ಪಾಶ್ಚಾತ್ಯ ರಾಷ್ಟ್ರಗಳ ನಿರ್ಧಾರವನ್ನು ಬೆಂಬಲಿಸಿದೆ. ರಷ್ಯಾದ ಮಿತ್ರ ರಾಷ್ಟ್ರ ಬೆಲಾರಸ್‌ ಜೊತೆಗಿನ ವಾಣಿಜ್ಯ ವ್ಯವಹಾರಕ್ಕೂ ಶುಕ್ರವಾರ ಕಡಿವಾಣ ಹಾಕಿದೆ.

ಈ ಕುರಿತುಮಾಧ್ಯಮದವರೊಂದಿಗೆ ಮಾತನಾಡಿರುವ ಜೋಸೆಫ್ ವು, ಉಕ್ರೇನ್‌ ಮೇಲಿನ ರಷ್ಯಾದ ಅತಿಕ್ರಮಣ ಹಾಗೂ ಆ ರಾಷ್ಟ್ರಕ್ಕೆ (ರಷ್ಯಾಗೆ) ಬೆಂಬಲ ನೀಡುತ್ತಿರುವ ಬೆಲಾರಸ್‌ ನಡೆಯನ್ನು ಖಂಡಿಸುವ ಇತರ ದೇಶಗಳೊಂದಿಗೆ ನಿಲ್ಲುವುದು ತುಂಬಾ ಮುಖ್ಯವಾದದ್ದು ಎಂದಿದ್ದಾರೆ.

ADVERTISEMENT

'ಭವಿಷ್ಯದಲ್ಲಿ ಚೀನಾ ಸೇನೆಯಿಂದ ಇಂತಹ ಭೀತಿ ಎದುರಾದರೆ ಅಥವಾ ಅತಿಕ್ರಮಣ ನಡೆದರೆ, ಅಂತರರಾಷ್ಟ್ರೀಯ ಸಮುದಾಯ ತೈವಾನ್‌ಗೆ ಖಂಡಿತವಾಗಿಯೂ ಬೆಂಬಲ ನೀಡಲಿದೆ. ಇಂತಹ ಆಕ್ರಮಣಕಾರಿ ನಡೆಯ ವಿರುದ್ಧ ನಿರ್ಬಂಧಗಳನ್ನು ಹೇರಲಿದೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

'ಹಾಗಾಗಿ, ತೈವಾನ್‌ ವಿಶ್ವ ಸಮುದಾಯದೊಂದಿಗೆ ನಿಂತಿದೆ ಮತ್ತು ಈ (ನಿರ್ಬಂಧ) ಕ್ರಮಗಳನ್ನು ಕೈಗೊಂಡಿದೆ' ಎಂದು ಹೇಳಿದ್ದಾರೆ.

ರಷ್ಯಾ ಸೇನೆ ಉಕ್ರೇನ್‌ ಮೇಲೆ ಫೆಬ್ರುವರಿಯಲ್ಲಿ ದಾಳಿ ಆರಂಭಿಸಿತ್ತು. ಇಂತಹದೇ ದಾಳಿಯನ್ನು ಚೀನಾ ಸೇನೆ ತನ್ನ ಮೇಲೆ ನಡೆಸಬಹುದು ಎಂದುತೈವಾನ್‌ ಆರಂಭದಿಂದಲೂ ಎಚ್ಚರಿಸುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.