ADVERTISEMENT

VIDEO: ಶಾಂಘೈಯಲ್ಲಿ ಗಮನ ಸೆಳೆದ ಮೋದಿ, ಪುಟಿನ್, ಜಿನ್‌ಪಿಂಗ್‌ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಸೆಪ್ಟೆಂಬರ್ 2025, 5:29 IST
Last Updated 1 ಸೆಪ್ಟೆಂಬರ್ 2025, 5:29 IST
<div class="paragraphs"><p>ವ್ಲಾದಿಮಿರ್ ಪುಟಿನ್, ನರೇಂದ್ರ ಮೋದಿ,&nbsp;ಷಿ ಜಿನ್‌ಪಿಂಗ್‌</p></div>

ವ್ಲಾದಿಮಿರ್ ಪುಟಿನ್, ನರೇಂದ್ರ ಮೋದಿ, ಷಿ ಜಿನ್‌ಪಿಂಗ್‌

   

(ಚಿತ್ರ ಕೃಪೆ: X/)

ತಿಯಾನ್‌ಜಿನ್‌: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ಈ ಸಂಬಂಧ ಸುದ್ದಿ ಸಂಸ್ಥೆ 'ಎಎನ್‌ಐ' ವಿಡಿಯೊ ಹಂಚಿಕೊಂಡಿದೆ.

ಎಸ್‌ಸಿಒ ಶೃಂಗದ ಎರಡನೇ ದಿನವಾದ ಸೋಮವಾರದಂದು ಮೂವರು ನಾಯಕರು ಪರಸ್ಪರ ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಮೂವರು ನಾಯಕರು ಪರಸ್ಪರ ಗೌರವದೊಂದಿಗೆ ಪ್ರೀತಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಹ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮಗದೊಂದು ಪೋಸ್ಟ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ತಬ್ಬಿಕೊಂಡಿರುವ ಚಿತ್ರ ಹಂಚಿರುವ ಪ್ರಧಾನಿ ಮೋದಿ, 'ನಿಮ್ಮನ್ನು ಭೇಟಿ ಮಾಡುವುದು ಸದಾ ಖುಷಿಯ ವಿಷಯ' ಎಂದಿದ್ದಾರೆ.

ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗದಲ್ಲಿ ಭಾರತ, ಚೀನಾ ಹಾಗೂ ರಷ್ಯಾದ ನಾಯಕರ ಭೇಟಿಯು ಹೆಚ್ಚಿನ ಗಮನ ಸೆಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.