ADVERTISEMENT

ರಷ್ಯಾದಲ್ಲಿ ಲೈವ್‌ ಸ್ಟ್ರೀಮಿಂಗ್ ಸ್ಥಗಿತಗೊಳಿಸಿದ ಟಿಕ್ ಟಾಕ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 4:57 IST
Last Updated 7 ಮಾರ್ಚ್ 2022, 4:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದ ಹೊಸ 'ನಕಲಿ ಸುದ್ದಿ' ತಡೆ ಕಾನೂನಿನ ಕಾರಣದಿಂದಾಗಿ ಕಿರು ವಿಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್, ರಷ್ಯಾದಲ್ಲಿ ತನ್ನ ವೇದಿಕೆಯಲ್ಲಿ ಹೊಸ ಕಂಟೆಂಟ್ ಮತ್ತು ಲೈವ್‌ ಸ್ಟ್ರೀಮಿಂಗ್ ಮಾಡುವ ಅವಕಾಶವನ್ನು ಸ್ಥಗಿತಗೊಳಿಸಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗಷ್ಟೇ ಕಾನೂನಿಗೆ ಸಹಿ ಹಾಕಿದ್ದರು. 'ಸೇನೆಯ ಬಗ್ಗೆ 'ನಕಲಿ ಸುದ್ದಿ' ಪ್ರಕಟಿಸಿದರೆ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಪರಿಚಯಿಸುವ ಮಸೂದೆಯನ್ನು ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಮುಂದೂಡಿತ್ತು.

'ರಷ್ಯಾದ ಹೊಸ ನಕಲಿ ಸುದ್ದಿ' ಕಾನೂನಿನ ಅಡಿಯಲ್ಲಿ, ನಾವು ಈ ಕಾನೂನಿನ ಸುರಕ್ಷತೆಯ ಪರಿಣಾಮಗಳನ್ನು ಪರಿಶೀಲಿಸುವಾಗ ನಮ್ಮ ವಿಡಿಯೊ ಸೇವೆಯ ಲೈವ್‌ ಸ್ಟ್ರೀಮಿಂಗ್ ಮತ್ತು ಹೊಸ ಕಂಟೆಂಟ್ ಅನ್ನು ಅಮಾನತುಗೊಳಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ಇದರಿಂದ ನಮ್ಮ ಅಪ್ಲಿಕೇಶನ್‌ನಲ್ಲಿನ ಮೆಸೇಜಿಂಗ್ ಸೇವೆ ಮೇಲೆ ಪರಿಣಾಮ ಉಂಟಾಗುವುದಿಲ್ಲ' ಎಂದು ಕಂಪನಿ ಟ್ವೀಟ್‌ ಮಾಡಿದೆ.

ADVERTISEMENT

ಟ್ವಿಟರ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮ ಸೇವೆಗಳನ್ನು ಬಳಸುವುದಕ್ಕೆ ರಷ್ಯಾ ನಿಧಾನವಾಗಿ ನಿರ್ಬಂಧ ವಿಧಿಸುತ್ತಿದೆ.

ಈ ಮಧ್ಯೆ, ಅಮೆರಿಕ ಮೂಲದ ವಿಡಿಯೊ ಗೇಮ್ ಕಂಪನಿ ಆಕ್ಟಿವಿಸನ್ ಬ್ಲಿಝಾರ್ಡ್ ರಷ್ಯಾದಲ್ಲಿ ತನ್ನ ಗೇಮ್‌ಗಳ ಹೊಸ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.