ADVERTISEMENT

ನೆರವಿಗೆ ಬಾರದ ಪಾಶ್ಚಾತ್ಯ ರಾಷ್ಟ್ರಗಳ ವಿರುದ್ಧ ಝೆಲೆನ್‌ಸ್ಕಿ ಆಕ್ರೋಶ

ಏಜೆನ್ಸೀಸ್
Published 8 ಮಾರ್ಚ್ 2022, 11:19 IST
Last Updated 8 ಮಾರ್ಚ್ 2022, 11:19 IST
ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್‌ ಝೆಲನ್‌ಸ್ಕಿ
ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್‌ ಝೆಲನ್‌ಸ್ಕಿ    

ಕೀವ್‌: ರಷ್ಯಾ ದಾಳಿಯಿಂದ ರಕ್ಷಿಸದ ಪಾಶ್ಚಾತ್ಯ ರಾಷ್ಟ್ರಗಳ ‘ಈಡೇರದ ಭರವಸೆ’ಗಳ ವಿರುದ್ಧ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮಂಗಳವಾರ ಕಿಡಿಕಾರಿದ್ದಾರೆ.

ಟೆಲಿಗ್ರಾಂನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಪಾಶ್ಚಾತ್ಯ ರಾಷ್ಟ್ರಗಳ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

‘ರಷ್ಯಾದ ಆಕ್ರಮಣ ಆರಂಭವಾಗಿ 13 ದಿನಗಳು ಕಳೆದವು. ಭರವಸೆಗಳನ್ನು ಕೇಳುತ್ತಲೇ ಇದ್ದೇವೆ. ನಮ್ಮ ವಾಯುಪ್ರದೇಶವನ್ನು ರಕ್ಷಿಸಲಾಗುತ್ತದೆ, ವಿಮಾನಗಳು ಬರಲಿವೆ, ಅವುಗಳನ್ನು ನಮಗೆ ತಲುಪಿಸಲಾಗುತ್ತದೆ ಎಂದು 13 ದಿನಗಳಿಂದ ಹೇಳುತ್ತಲೇ ಬರಲಾಗುತ್ತಿದೆ’ ಎಂದು ಪಾಶ್ಚಾತ್ಯ ರಾಷ್ಟ್ರಗಳ ಭರವಸೆಯನ್ನು ಖಂಡಿಸಿದರು.

ADVERTISEMENT

ರಷ್ಯಾದ ಯುದ್ಧ ವಿಮಾನಗಳನ್ನು ತಡೆಯಲು ಉಕ್ರೇನ್‌ನಲ್ಲಿ ‘ಹಾರಾಟ ನಿಷೇಧ ವಲಯ’ (ನೋ ಫ್ಲೈ ಜೋನ್‌) ರಚಿಸುವಂತೆ ಝೆಲೆನ್‌ಸ್ಕಿ ನ್ಯಾಟೊವನ್ನು ಕೇಳುತ್ತಲೇ ಬಂದಿದ್ದಾರೆ. ಆದರೆ, ಹಾಗೆ ಹಾರಾಟ ನಿಷೇಧ ವಲಯ ರಚಿಸಿದರೆ ಅದು ಯುದ್ಧದಲ್ಲಿ ಪಾಲ್ಗೊಂಡಂತೆ ಆಗುತ್ತದೆ ಎಂದು ಹೇಳಿರುವ ನ್ಯಾಟೊ, ಝೆಲೆನ್‌ಸ್ಕಿ ಪ್ರಸ್ತಾವವನ್ನು ತಿರಸ್ಕರಿಸುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.