ADVERTISEMENT

ಸ್ಪೇನ್‌, ಡೆನ್ಮಾರ್ಕ್ ಪ್ರಧಾನಿಗಳೊಂದಿಗೆ ಝೆಲೆನ್‌ಸ್ಕಿ ಸಭೆ: ನೆರವಿಗೆ ಮನವಿ

ಐಎಎನ್ಎಸ್
Published 22 ಏಪ್ರಿಲ್ 2022, 3:08 IST
Last Updated 22 ಏಪ್ರಿಲ್ 2022, 3:08 IST
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ   

ಕೀವ್‌: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಸ್ಪೇನ್‌ ಪ್ರಧಾನಿ ಪೆಡ್ರೊ ಸಂಖೇಜ್ ಮತ್ತು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್‌ ಅವರೊಂದಿಗೆ ಮಾತುಕತೆ ನಡೆಸಿದ್ದು, ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಗುರುವಾರ ನಡೆದ ಸಭೆಯಲ್ಲಿ, ಉಕ್ರೇನ್‌ ರಕ್ಷಣಾ ಸಾಮರ್ಥ್ಯ ವೃದ್ಧಿ, ಯುರೋಪಿಯನ್‌ ಒಕ್ಕೂಟಕ್ಕೆ ಉಕ್ರೇನ್‌ ಏಕೀಕರಣವನ್ನು ಬೆಂಬಲಿಸುವುದು ಮತ್ತು ಯುದ್ಧದ ಬಳಿಕ ಚೇತರಿಕೆ ಹೇಗೆ ಎಂಬ ವಿಚಾರವಾಗಿ ಮಾತುಕತೆ ನಡೆಸಲಾಗಿದೆ ಎಂದು 'ಕ್ಸಿನ್ಹುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.

ಸಭೆಯ ಬಳಿಕ ಮಾತನಾಡಿರುವ ಝೆಲನ್‌ಸ್ಕಿ, ಸ್ಪೇನ್‌ ಮತ್ತು ಡೆನ್ಮಾರ್ಕ್‌ ದೇಶಗಳ ಮಿಲಿಟರಿ ಮತ್ತು ಆರ್ಥಿಕ ನೆರವನ್ನು ಉಕ್ರೇನ್ ಎದುರು ನೋಡುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

'ಉಕ್ರೇನ್‌ನ ಅಗತ್ಯತೆಗಳು ಏನು ಎಂಬುದನ್ನು ನಮ್ಮ ಅತಿಥಿಗಳಿಗೆ ವಿವರಿಸಿದ್ದೇವೆ. ಅವರಿಂದ ದೊರೆಯುವ ಸಕಾಲದ ನೆರವಿಗಾಗಿ ಕಾಯುತ್ತಿದ್ದೇವೆ' ಎಂದೂ ಉಕ್ರೇನ್‌ ಅಧ್ಯಕ್ಷರು ಹೇಳಿದ್ದಾರೆ.

ಡೆನ್ಮಾರ್ಕ್‌ ಮತ್ತು ಸ್ಪೇನ್‌ ನಾಯಕರು ಗುರುವಾರ ಕೀವ್‌ಗೆ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.