ADVERTISEMENT

H-1B, H-4 Visa: ಹೊಸ ಎಚ್ಚರಿಕೆ ನೀಡಿದ ಅಮೆರಿಕ ರಾಯಭಾರ ಕಚೇರಿ

ಪಿಟಿಐ
Published 23 ಡಿಸೆಂಬರ್ 2025, 7:34 IST
Last Updated 23 ಡಿಸೆಂಬರ್ 2025, 7:34 IST
   

ನವದೆಹಲಿ: ಎಚ್‌1–ಬಿ ಹಾಗೂ ಎಚ್-4 ವೀಸಾ ಅರ್ಜಿದಾರರಿಗೆ ಹೊಸ ಎಚ್ಚರಿಕೆಯನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಹೊರಡಿಸಿದೆ.

ಎಚ್‌1–ಬಿ ಹಾಗೂ ಎಚ್-4 ವೀಸಾ ಅರ್ಜಿದಾರರ ಸಾಮಾಜಿಕ ಮಾಧ್ಯಮ ಪರಿಶೀಲನೆ ನಿಯಮವನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ.

ಈ ತಿಂಗಳು ನಿಗದಿಯಾಗಿದ್ದ ಎಚ್‌1–ಬಿ ವೀಸಾ ಅರ್ಜಿದಾರರ ಸಂದರ್ಶನವನ್ನು ದಿಢೀರ್‌ ಮುಂದೂಡಲಾದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.

ADVERTISEMENT

ವೀಸಾ ಪರಿಶೀಲನೆಯ ಭಾಗವಾಗಿ ಡಿಸೆಂಬರ್ 15ರಿಂದ ಅರ್ಜಿದಾರರ ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾವನ್ನು ವಿಸ್ತರಿಸಿದೆ. ಎಲ್ಲ ರಾಷ್ಟ್ರೀಯತೆಯ ಎಚ್‌1–ಬಿ ಹಾಗೂ ಎಚ್-4 ವೀಸಾ ಅರ್ಜಿದಾರರಿಗೆ ಇದು ಅನ್ವಯವಾಗಲಿದೆ. ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡುವಾಗ ಸಂಭವನೀಯ ದುರಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವಲಸೆರಹಿತ ಎಚ್‌1–ಬಿ ಹಾಗೂ ಎಚ್-4 ವೀಸಾ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸುವುದನ್ನು ಅಮೆರಿಕ ರಾಯಭಾರ ಕಚೇರಿ ಹಾಗೂ ದೂತವಾಸಗಳ ಕೇಂದ್ರಗಳು ಮುಂದುವರಿಸಲಿವೆ.

ವೀಸಾ ಪರಿಶೀಲನೆಗೆ ಹೆಚ್ಚು ಸಮಯ ತೆಗೆದುಕೊಳ್ಳಲಿದ್ದು, ಆದಷ್ಟು ಬೇಗನೇ ಅರ್ಹರು ಅರ್ಜಿ ಸಲ್ಲಿಸುವಂತೆಯೂ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.