ADVERTISEMENT

2026ರಲ್ಲಿ ಈ 7 ನಿರ್ಣಯಗಳನ್ನು ತಪ್ಪದೇ ಕೈಗೊಳ್ಳಿ: ಜೀವನವೆ ಬದಲಾಗಬಹುದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 6:10 IST
Last Updated 1 ಜನವರಿ 2026, 6:10 IST
ಈ ವರ್ಷ ಇದೇ ನನ್ನ ನಿರ್ಧಾರ
ಈ ವರ್ಷ ಇದೇ ನನ್ನ ನಿರ್ಧಾರ   

2025ನೇ ಇಸವಿ ಮುಕ್ತಾಯಗೊಂಡು 2026ಕ್ಕೆ ಕಾಲಿಟ್ಟಾಗಿದೆ. ಅನೇಕರು ಪ್ರತೀ ವರ್ಷ ತಾವು ಕೈಗೊಳ್ಳಬಹುದಾದ ಪ್ರಮುಖ ಕೆಲಸಗಳ ಕುರಿತು ನಿರ್ಣಯಗಳನ್ನು ತೆಗೆದುಕೊಂಡಿರುತ್ತಾರೆ. ಅದರಂತೆ, ಈ ವರ್ಷ ಕೂಡ ಆರೋಗ್ಯ, ಭವಿಷ್ಯದ ದೃಷ್ಟಿಯಿಂದ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವುದು ಮುಖ್ಯ.

ತೂಕ ಇಳಿಸುವುದು: ಪ್ರತೀ ವರ್ಷ ಅನೇಕರು ತೆಗೆದುಕೊಳ್ಳುವ ಸಾಮಾನ್ಯ ನಿರ್ಣಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿರುವ ದೇಹದ ತೂಕ ಇಳಿಸುವುದು ಒಂದು. ಆದರೆ, ಆರಂಭದ ಕೆಲವು ದಿನಗಳ ಕಾಲ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ತೂಕ ಇಳಿಕೆಗೆ ಪ್ರಯತ್ನ ಮಾಡುತ್ತಾರೆ. ಆದರೆ, ಕ್ರಮೇಣ ಅದನ್ನು ಮೆರೆತುಬಿಡುತ್ತಾರೆ. ಆದರೆ, ಹೆಚ್ಚು ತೂಕ ಹೊಂದಿರುವವರು ಆರೋಗ್ಯದ ದೃಷ್ಟಿಯಿಂದ ತೂಕ ಇಳಿಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಿರುವುದರಿಂದ ತೂಕ ಇಳಿಕೆ ಕುರಿತು ದೃಢ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ವ್ಯಾಯಾಮ: ಹೊಸ ವರ್ಷ ಬರುವುದಕ್ಕೆ ಮೊದಲು ಅನೇಕರು ನಿರಂತರವಾಗಿ ವ್ಯಾಯಾಮ ಮಾಡಬೇಕು. ಜಿಮ್‌ಗೆ ಹೋಗಬೇಕು ಎಂದೆಲ್ಲಾ ಯೋಜನೆ ಹಾಕಿಕೊಳ್ಳುತ್ತಾರೆ. ಆದರೆ, ಅದು ಕೆಲವೇ ದಿನಗಳಿಗೆ ಸೀಮಿತವಾಗುತ್ತದೆ. ಆದರೆ, ಈ ವರ್ಷ ದೃಢ ನಿರ್ಧಾರದ ಮೂಲಕ ವ್ಯಾಯಾಮಕ್ಕೆ ತೆರಳಿ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ.

ADVERTISEMENT

ಉಳಿತಾಯ: ಭವಿಷ್ಯದ ದೃಷ್ಟಿಯಿಂದ ನಿಮ್ಮ ಗಳಿಕೆಯ ಒಂದು ಭಾಗವನ್ನು ಉಳಿತಾಯ ಮಾಡುವುದು ಮುಖ್ಯ. ಹಾಗಾಗಿ, ಈ ವರ್ಷ ನೀವು ದೃಢ ನಿರ್ಧಾರ ಮಾಡಿ ನಿಮ್ಮ ದುಡಿಮೆಯಲ್ಲಿ ಇಷ್ಟು ಮೊತ್ತವನ್ನು ಉಳಿತಾಯ ಮಾಡಿಯೇ ತೀರುತ್ತೇನೆ ಎಂದು.

ಗುಣಮಟ್ಟದ ಆಹಾರ: ಅನೇಕರು ಪಿಟ್ಜಾ, ಬರ್ಗರ್ ಮತ್ತು ಪಾಸ್ತಾದಂತಹ ರುಚಿಕರ ಆಹಾರಕ್ಕೆ ಒಗ್ಗಿಕೊಂಡಿರುತ್ತಾರೆ. ಆದರೆ, ಈ ವರ್ಷ ನೀವು ತೆಗೆದುಕೊಳ್ಳಬೇಕಾದ ನಿರ್ಣಯಗಳಲ್ಲಿ ಗುಣಮಟ್ಟದ ಆಹಾರ ಸೇವನೆ ಕೂಡ ಒಂದು. ವಿಶೇಷವಾಗಿ ತರಕಾರಿ, ಹಣ್ಣುಗಳನ್ನು ಸೇವಿಸುವುದು ಹಾಗೂ ರಸ್ತೆ ಬದಿ ತಿನಿಸುಗಳನ್ನು ತ್ಯಜಿಸುವುದು.

ಧೂಮಪಾನ ತ್ಯಜಿಸುವುದು: ಮದ್ಯಪಾನ ಹಾಗೂ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಅನೇಕರು ಇವುಗಳ ವ್ಯಸನಕ್ಕೆ ಒಳಗಾಗಿರುತ್ತಾರೆ. ಹಾಗಾಗಿ ಈ ವರ್ಷ ನೀವು ತೆಗೆದುಕೊಳ್ಳಬಹುದಾದ ಪ್ರಮುಖ ನಿರ್ಣಯಗಳಲ್ಲಿ ಈ ಧೂಮಪಾನ ತ್ಯಜಿಸುವುದು ಕಡ್ಡಾಯವಾಗಿರಲಿ.

ಪ್ರವಾಸ: ಕೆಲಸದ ಒತ್ತಡದಿಂದ ಮಾನಸಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಆಗಾಗ ಪ್ರವಾಸ ಕೈಗೊಳ್ಳುವುದು ಮುಖ್ಯ. ವಿಶೇಷವಾಗಿ ನೈಸರ್ಗಿಕ ತಾಣಗಳಿಗೆ ಹೋಗುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಹಾಗಾಗಿ ನೀವು ಈ ವರ್ಷ ಯಾವೆಲ್ಲಾ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬೇಕು ಎಂಬುದನ್ನು ಈಗಲೇ ಪಟ್ಟಿ ಸಿದ್ಧಪಡಿಸಿಕೊಳ್ಳಿ.

ನಿದ್ದೆ: ನಿದ್ದೆಯ ಮಹತ್ವ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಉತ್ತಮ ನಿದ್ದೆ ನಿಮ್ಮ ಇಡೀ ದಿನವನ್ನು ಉತ್ತಮವಾಗಿಡುತ್ತದೆ. ಹಾಗಾಗಿ ಪ್ರತಿನಿತ್ಯ ಯಾವುದೇ ಅಡೆತಡೆ ಇಲ್ಲದೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಸದೃಢ ಆರೋಗ್ಯ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.