ಕೇಂದ್ರ ಸರ್ಕಾರವು ದೇಶದ ರೈತರ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಪಡಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ರೈತರಿಗೆ ವಾರ್ಷಿಕವಾಗಿ ₹6 ಸಾವಿರ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ ₹2 ಸಾವಿರದಂತೆ ರೈತನ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ.
2018ರ ಡಿ.1ರಂದು ಯೋಜನೆಯು ಆರಂಭವಾಯಿತು. ದೇಶದ ಎಲ್ಲಾ ರೈತರು ಈ ಯೋಜನೆಯನ್ನು ಪಡೆಯಬಹುದು. ಭೂಮಿ ಹೊಂದಿರುವ ಎಲ್ಲಾ ಭೂ ಹಿಡುವಳಿದಾರ ಕುಟುಂಬಗಳು ಈ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಯಾವುವು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.
ಅಗತ್ಯ ದಾಖಲೆಗಳು ಯಾವುವು?
ಆಧಾರ್ ಕಾರ್ಡ್
ಭೂ ಹಿಡುವಳಿ ಪತ್ರಗಳು
ಬ್ಯಾಂಕ್ ಉಳಿತಾಯ ಖಾತೆ
ಯಾರು ಈ ಯೋಜನೆಗೆ ಅನರ್ಹರು?
ಅರ್ಜಿದಾರರ ಕುಟುಂಬದಲ್ಲಿ ಯಾರೊಬ್ಬರೂ ಸಾಂವಿಧಾನಿಕ ಹುದ್ದೆಯಲ್ಲಿ ಇರಬಾರದು.
ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ಸರ್ಕಾರಿ ಉದ್ಯೋಗಿಗಳು ಈ ಯೋಜನೆಯನ್ನು ಪಡೆಯಲು ಅನರ್ಹರು.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಯೋಜನೆ ಅಧಿಕೃತ ಅಂತರ್ಜಾಲ ತಾಣವಾದ 'https://pmkisan.gov.in/' ಭೇಟಿ ನೀಡಿ
ತೆರೆದ ವೆಬ್ ಪುಟವನ್ನು ಕೆಳಕ್ಕೆ ಸ್ಕ್ರಾಲ್ ಮಾಡಿ. ನಂತರ 'Farmers Corner' ಕಾಣುತ್ತದೆ. ಅಲ್ಲಿ 'New Farmers Registration' ಆಯ್ಕೆ ಮಾಡಿ.
'New Farmers Registration form' ಪುಟ ತೆರೆಯುತ್ತದೆ. ಅಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ 'Otp' ಯನ್ನು ಪಡೆಯಿರಿ.
ನಂತರ ದಾಖಲೆಗಳನ್ನು ಸೇರಿಸುವ ಪುಟ ತೆರೆಯುತ್ತದೆ. ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳ ಫೋಟೋಗಳನ್ನು ಅಪ್ಲೋಡ್ ಮಾಡಿ ಸೇವ್ ಮಾಡಬೇಕು.
ಸೇವ್ ನಂತರ ನಿಮ್ಮ ಅರ್ಜಿಯು ಸ್ಪೀಕಾಸರವಾಗಿರುತ್ತದೆ. ಯೋಜನೆಗೆ ಸಂಬಂಧಿಸಿದ ಸ್ಟೇಟಸ್ ನೋಡಲು ಆಧಾರ್ ಸಂಖ್ಯೆಯನ್ನು ನಮೂದಿಸಿ ನೋಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.