ADVERTISEMENT

IND vs PAK | ಕೊಹ್ಲಿ ಆಟಕ್ಕೆ ಮನಸೋತ ಪತ್ನಿ ಅನುಷ್ಕಾರಿಂದ ಪ್ರೀತಿಯ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2025, 6:17 IST
Last Updated 24 ಫೆಬ್ರುವರಿ 2025, 6:17 IST
<div class="paragraphs"><p>ಇನ್‌ಸ್ಟಾಗ್ರಾಮ್‌ ಚಿತ್ರ&nbsp;</p></div>
   

ಇನ್‌ಸ್ಟಾಗ್ರಾಮ್‌ ಚಿತ್ರ 

ಬೆಂಗಳೂರು: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾನುವಾರ ನಡೆದ ಭಾರತ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್‌, ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ತೋರಿದ ಪ್ರದರ್ಶನ ಬಗ್ಗೆ ಮಡದಿ ಅನುಷ್ಕಾ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಅನುಷ್ಕಾ, ತಮ್ಮ ಪತಿಯ ಮೇಲಿನ ಪ್ರೀತಿಯನ್ನು ಪೋಸ್ಟ್‌ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಭಾನುವಾರ ರಾತ್ರಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ವಿರಾಟ್‌ ಕೊಹ್ಲಿ ಅಜೇಯ 100 ಗಳಿಸಿದ್ದರು. ಭಾರತ ತಂಡ ಗೆಲುವಿಗೆ ಸಮಾನ ಕಾರಣರಾದ ಕೊಹ್ಲಿಗೆ ಅನುಷ್ಕಾ ಅಭಿನಂದನೆ ಸಲ್ಲಿಸಿದ್ದಾರೆ.

ಪತಿ ವಿರಾಟ್‌ ಆಡುವ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ತೆರಳಿ ಭಾರತ ತಂಡವನ್ನು ಪ್ರೋತ್ಸಾಹಿಸುವ ಅನುಷ್ಕಾ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡು ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಳೆಯ ಎದುರಾಳಿಯೇ ಆಗಿರುವ ಪಾಕಿಸ್ತಾನ ಈ ಹಿಂದೆಯೂ ವಿರಾಟ್ ಪ್ರತಾಪದ ಬಿಸಿ ಅನುಭವಿಸಿತ್ತು. ಇಲ್ಲಿ ದಾಖಲಿಸಿದ ಕೊಹ್ಲಿ (ಅಜೇಯ 100) ಆಟಕ್ಕೆ ಮೊಹಮ್ಮದ್ ರಿಜ್ವಾನ್ ಬಳಗವು ಶರಣಾಯಿತು. ವಿರಾಟ್ 51ನೇ ಶತಕ ದಾಖಲಿಸಿದರು. 2023ರ ನವೆಂಬರ್‌ನಲ್ಲಿ ವಿಶ್ವಕಪ್ ಪಂದ್ಯದಲ್ಲಿ ಶತಕ ಹೊಡೆದಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಸಾಧನೆ

51: ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ದಾಖಲೆಯ ಶತಕಗಳು. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (49) ನಂತರದ ಸ್ಥಾನದಲ್ಲಿದ್ದಾರೆ

158: ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಪಡೆದ ಒಟ್ಟು ಕ್ಯಾಚ್‌ಗಳು. ಈ ಮೂಲಕ ಭಾರತದ ಮೊಹಮ್ಮದ್‌ ಅಜರುದ್ದೀನ್‌ (156) ದಾಖಲೆಯನ್ನು ಮೀರಿ ನಿಂತರು. ಶ್ರೀಲಂಕಾದ ಮಹೇಲ ಜಯವರ್ಧನೆ (218) ಮತ್ತು ರಿಕಿ ಪಾಟಿಂಗ್‌ (160) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.

5: ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್‌ ಕೊಹ್ಲಿ ಪಡೆದ ‘ಪಂದ್ಯದ ಆಟಗಾರ’ ಗೌರವ. ಯಾವುದೇ ದೇಶದ ಆಟಗಾರ ಒಂದೇ ತಂಡದ ವಿರುದ್ಧ ಮೂರಕ್ಕಿಂತ ಅಧಿಕ ಬಾರಿ ಈ ಗೌರವ ಗಳಿಸಿಲ್ಲ.

11: ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಗರಿಷ್ಠ ಎಸೆತ ಬೌಲಿಂಗ್‌ ಮಾಡಿದ ದಾಖಲೆಯನ್ನು ಮೊಹಮ್ಮದ್‌ ಶಮಿ ಅವರು ಇರ್ಫಾನ್‌ ಪಠಾಣ್‌ (2006) ಮತ್ತು ಜಹೀರ್‌ ಖಾನ್‌ (2003) ಅವರೊಂದಿಗೆ ಹಂಚಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.