ADVERTISEMENT

Asia Cup: ಬಾಂಗ್ಲಾ ಗೆಲುವಿಗೆ 144 ರನ್‌ಗಳ ಗುರಿ ಒಡ್ಡಿದ ಹಾಂಗ್‌ಕಾಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2025, 16:21 IST
Last Updated 11 ಸೆಪ್ಟೆಂಬರ್ 2025, 16:21 IST
<div class="paragraphs"><p>ಬಾಂಗ್ಲಾದೇಶ vs ಹಾಂಗ್‌ಕಾಂಗ್</p></div>

ಬಾಂಗ್ಲಾದೇಶ vs ಹಾಂಗ್‌ಕಾಂಗ್

   

(ಚಿತ್ರ ಕೃಪೆ: X/@ACCMedia1)

ಅಬುಧಾಬಿ: ಏಷ್ಯಾ ಕಪ್ 2025 ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 'ಬಿ' ಗುಂಪಿನಲ್ಲಿ ಇಂದು (ಗುರುವಾರ) ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹಾಂಕ್‌ಕಾಂಗ್ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ADVERTISEMENT

ಟಾಸ್ ಗೆದ್ದಿರುವ ಬಾಂಗ್ಲಾದೇಶದ ನಾಯಕ ಲಿಟನ್ ದಾಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಹಾಂಕ್‌ಕಾಂಗ್ ಆರಂಭ ಉತ್ತವಾಗಿರಲಿಲ್ಲ. ಆರಂಭಿಕ ಅನ್ಶುಮಾನ್ ರಾತ್ ಕೇವಲ 4 ರನ್ ಗಳಿಸಿ ಔಟ್ ಆದರು.

ಮಗದೋರ್ವ ಆರಂಭಿಕ ಜೀಶನ್ ಅಲಿ 30 ರನ್‌ ಗಳಿಸಿದರು. ಬಾಬರ್ ಹಯಾತ್ 14 ರನ್ ಗಳಿಸಿ ನಿರ್ಗಮಿಸಿದರು.

ಮಧ್ಯಮ ಕ್ರಮಾಂಕದಲ್ಲಿ ನಿಝಕತ್ ಖಾನ್ (42) ಹಾಗೂ ನಾಯಕ ಯಾಸೀಮ್ ಮುರ್ತಜಾ (28) ಉಪಯುಕ್ತ ಇನಿಂಗ್ಸ್ ಕಟ್ಟುವ ಮೂಲಕ ತಂಡವು ಸನ್ಮಾನಜನಕ ಮೊತ್ತ ಪೇರಿಸಲು ನೆರವಾದರು.

ಬಾಂಗ್ಲಾದೇಶದ ಪರ ತನ್ಜೀಮ್ ಹಸನ್ ಶಕೀಬ್, ತಸ್ಕಿನ್ ಅಹ್ಮದ್ ಹಾಗೂ ರಿಷಾದ್ ಹೊಸೈನ್ ತಲಾ ಎರಡು ವಿಕೆಟ್ ಗಳಿಸಿದರು.

ಟೂರ್ನಿಯಲ್ಲಿ ಬಾಂಗ್ಲಾದೇಶಕ್ಕೆ ಇದು ಮೊದಲ ಪಂದ್ಯವಾಗಿದ್ದು, ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಳ್ಳುವ ಇರಾದೆಯಲ್ಲಿದೆ.

ಅತ್ತ ಅಫ್ಗಾನಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಹಾಂಕ್‌ಕಾಂಗ್ ಹೀನಾಯ ಸೋಲು ಕಂಡಿತ್ತು.

ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಈ ಪಂದ್ಯದಲ್ಲಿ ಗೆಲುವು ದಾಖಲಿಸಬೇಕಾಗಿರುವುದು ಹಾಂಕ್‌ಕಾಂಗ್ ಪಾಲಿಗೆ ಮಹತ್ವದೆನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.