ADVERTISEMENT

ಏಷ್ಯಾ ಕಪ್‌ 2025: ಶುಭಮನ್‌ ಗಿಲ್‌, ಜಸ್‌ಪ್ರೀತ್ ಬೂಮ್ರಾ ಫಿಟ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:14 IST
Last Updated 31 ಆಗಸ್ಟ್ 2025, 23:14 IST
<div class="paragraphs"><p>ಶುಭಮನ್‌ ಗಿಲ್‌</p></div>

ಶುಭಮನ್‌ ಗಿಲ್‌

   

ಬೆಂಗಳೂರು: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಹಾಗೂ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಗಿಲ್‌, ರೋಹಿತ್, ವೇಗಿ ಜಸ್‌ಪ್ರೀತ್ ಬೂಮ್ರಾ, ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಸೇರಿ ಭಾರತ ತಂಡದ ಆಟಗಾರರು ಇಲ್ಲಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ (ಸಿಒಇ) ಭಾನುವಾರ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗಿದ್ದರು.

ADVERTISEMENT

ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತ ತಂಡದ ಉಪನಾಯಕರಾಗಿರುವ ಗಿಲ್‌ ಅವರು
ಬೆಂಗಳೂರಿನಿಂದಲೇ ದುಬೈಗೆ ತೆರಳುವರು ಎಂದೂ ಪಿಟಿಐ ವರದಿ ಮಾಡಿದೆ. ಸೆ. 9ರಿಂದ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು ಎದುರಿಸಲಿದೆ.

ಫ್ಲೂ ಆಗಿದ್ದರಿಂದ ಗಿಲ್ ಅವರು ದುಲೀಪ್ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರ ವಲಯ ತಂಡದ ಪರ ಕಣಕ್ಕಿಳಿದಿರಲಿಲ್ಲ. ಹೀಗಾಗಿ ಅವರಿಗೆ ಫಿಟ್‌ನೆಸ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿತ್ತು.

ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರೂ ಇಲ್ಲಿ ಫಿಟ್‌ನೆಸ್ ಪರೀಕ್ಷೆ ನೀಡಿದ್ದಾರೆ ಎಂದೂ ಪಿಟಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.