ADVERTISEMENT

T20 World Cup ಸೆಮಿಫೈನಲ್: ಸೂರ್ಯಕುಮಾರ್ ಅದ್ಭುತ ಆಟಗಾರ ಎಂದ ಸ್ಟೋಕ್ಸ್

ಏಜೆನ್ಸೀಸ್
Published 8 ನವೆಂಬರ್ 2022, 6:51 IST
Last Updated 8 ನವೆಂಬರ್ 2022, 6:51 IST
ಸೂರ್ಯಕುಮಾರ್‌ ಯಾದವ್‌ (ಪಿಟಿಐ ಚಿತ್ರ)
ಸೂರ್ಯಕುಮಾರ್‌ ಯಾದವ್‌ (ಪಿಟಿಐ ಚಿತ್ರ)   

ಅಡಿಲೇಡ್: ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯಲಿರುವ ತಮ್ಮ ತಂಡ ಸೂರ್ಯಕುಮಾರ್‌ ಯಾದವ್‌ ಅವರನ್ನು ಬೇಗನೆ ಔಟ್‌ ಮಾಡಬೇಕಿದೆ ಎಂದು ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಂಡಿರುವ ಚುಟುಕು ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯಅಡಿಲೇಡ್‌ ಓವಲ್‌ ಮೈದಾನದಲ್ಲಿ ನವೆಂಬರ್‌ 10 ರಂದು ನಡೆಯಲಿದೆ. ಈ ಪಂದ್ಯದಲ್ಲಿಭಾರತ ಮತ್ತು ಇಂಗ್ಲೆಂಡ್‌ ಮುಖಾಮುಖಿಯಾಗಲಿವೆ.

ಭಾರತ ಪರ ಮಧ್ಯಮ ಕ್ರಮಾಂಕದಲ್ಲಿಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್‌ ಯಾದವ್‌ ಎದುರಾಳಿ ತಂಡಗಳಿಗೆ ತಲೆನೋವಾಗಿದ್ದಾರೆ.ಐಸಿಸಿ ಟಿ20 ಬ್ಯಾಟರ್‌ಗಳರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಅವರು 193.96ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು, 225 ರನ್‌ ಸಿಡಿಸಿದ್ದಾರೆ.

ADVERTISEMENT

ಅವರ ಬಗ್ಗೆ ಸ್ಟೋಕ್ಸ್‌ ಮಾತನಾಡಿದ್ದಾರೆ.

'ಸೂರ್ಯಕುಮಾರ್ ನಿಸ್ಸಂಶಯವಾಗಿ ಅಮೋಘ ಆಟದ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಅವರೊಬ್ಬ ಅದ್ಭುತ ಆಟಗಾರ.ಶ್ರೇಷ್ಠ ಲಯದಲ್ಲಿರುವ ಅವರು ನೀವು ತಲೆ ಕರೆದುಕೊಳ್ಳುವಂತಹ ಹೊಡೆತಗಳನ್ನು ಬಾರಿಸಬಲ್ಲರು.ಆದರೆ, ಅವರು ಸ್ಫೋಟಕ ಬ್ಯಾಟಿಂಗ್‌ ಮಾಡಲು ಅವಕಾಶ ನೀಡದೆ ಔಟ್‌ ಮಾಡುವ ವಿಶ್ವಾದಲ್ಲಿದ್ದೇವೆ' ಎಂದಿದ್ದಾರೆ.

ಸೂಪರ್‌ 12ರ ಹಂತದ ಕೊನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ್ದ ಯಾದವ್‌ ಕೇವಲ 25 ಎಸೆತಗಳಲ್ಲಿ 61 ರನ್ ಬಾರಿಸಿ ಮಿಂಚಿದ್ದರು. ಮೈದಾನದ ಮೂಲೆಮೂಲೆಗೂ ಚೆಂಡನ್ನು ಬಾರಿಸಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದರು.

ನಾಳೆ (ನವೆಂಬರ್‌ 9) ಸಿಡ್ನಿಯಲ್ಲಿ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಫೈನಲ್ ಪಂದ್ಯವು ಮೆಲ್ಬರ್ನ್‌ನಲ್ಲಿ ನವೆಂಬರ್‌ 13ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.