ADVERTISEMENT

ನಿವೃತ್ತಿಯ ಬೆನ್ನಲ್ಲೇ ಕೋಚಿಂಗ್ ಮಾಡಲು ಸಿದ್ಧ ಎಂದ ಚೇತೇಶ್ವರ ಪೂಜಾರ

ಪಿಟಿಐ
Published 28 ಆಗಸ್ಟ್ 2025, 10:16 IST
Last Updated 28 ಆಗಸ್ಟ್ 2025, 10:16 IST
<div class="paragraphs"><p>ಚೇತೇಶ್ವರ ಪೂಜಾರ</p></div>

ಚೇತೇಶ್ವರ ಪೂಜಾರ

   

(ಪಿಟಿಐ ಚಿತ್ರ)

ನವದೆಹಲಿ: ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಟೀಮ್ ಇಂಡಿಯಾದ ಕಲಾತ್ಮಕ ಬ್ಯಾಟರ್ ಚೇತೇಶ್ವರ ಪೂಜಾರ, ಭವಿಷ್ಯದಲ್ಲಿ ಕೋಚಿಂಗ್ ಹುದ್ದೆ ವಹಿಸುವ ಬಗ್ಗೆ ಉತ್ಸುಕತೆ ತೋರಿದ್ದಾರೆ.

ADVERTISEMENT

'ನಾನು ಈವರೆಗೆ ವೀಕ್ಷಕ ವಿವರಣೆಯನ್ನು ಆನಂದಿಸಿದ್ದೇನೆ. ಖಂಡಿತವಾಗಿಯೂ ಅದರಲ್ಲಿ ಮುಂದುವರಿಯುತ್ತೇನೆ. ತರಬೇತಿ ಅಥವಾ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಇನ್ಯಾವುದೇ ಹುದ್ದೆಯ ವಿಷಯ ಬಂದಾಗ ನಾನು ಮುಕ್ತವಾಗಿರುತ್ತೇನೆ' ಎಂದು ತಿಳಿಸಿದ್ದಾರೆ.

'ನಿಜವಾಗಿಯೂ ಆ ಕುರಿತು ನಾನು ಯೋಚನೆ ಮಾಡಿಲ್ಲ. ಆದರೆ ಅವಕಾಶ ಸಿಕ್ಕಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತೇನೆ. ಒಟ್ಟಾರೆಯಾಗಿ ಈ ಹಿಂದೆ ಹೇಳಿದಂತೆ ಕ್ರಿಕೆಟ್ ಜೊತೆಗಿನ ನಂಟು ಮುಂದುವರಿಯಲಿದೆ' ಎಂದಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ಕೊಡುಗೆ ಸಲ್ಲಿಸಲು ಸಿಗುವ ಎಲ್ಲ ಅವಕಾಶವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಿವೃತ್ತಿಯ ಬಗ್ಗೆ ವಿಷಾದವಿಲ್ಲ ಎಂದು ಪೂಜಾರ ಪುನರುಚ್ಚರಿಸಿದ್ದಾರೆ. ಅಲ್ಲದೆ ಯುವ ಆಟಗಾರರಿಗೆ ಹಾದಿ ಬಿಟ್ಟುಕೊಡಲು ಇದುವೇ ಸೂಕ್ತವಾದ ಸಮಯ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.