ಗುಜರಾತ್ ಕ್ರಿಕೆಟ್ ತಂಡದ ಊರ್ವಿಲ್ ಪಟೇಲ್
ನವದೆಹಲಿ: ಗುಜರಾತ್ ತಂಡದ ವಿಕೆಟ್‌ಕೀಪರ್–ಬ್ಯಾಟರ್ ಊರ್ವಿಲ್ ಪಟೇಲ್ 28 ಎಸೆತಗಳಲ್ಲಿ ಶತಕ ಹೊಡೆದರು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ವೇಗದ ಶತಕ ದಾಖಲಿಸಿದ ಆಟಗಾರನಾದರು.
ಬುಧವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಗುಜರಾತ್ ತಂಡದ ಪಟೇಲ್ (ಅಜೇಯ 113; 35ಎ 4X7 6X12) ಈ ಸಾಧನೆ ಮಾಡಿದರು. ಅವರ ಆಟದಿಂದಾಗಿ ತಂಡವು 8 ವಿಕೆಟ್‌ಗಳಿಂದ ಜಯಿಸಿತು.
ಬರೋಬ್ಬರಿ ಒಂದು ವರ್ಷದ ಹಿಂದೆ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಎರಡನೇ ಅತಿ ವೇಗದ ಶತಕವನ್ನು ದಾಖಲಿಸಿದ್ದರು.
26 ವರ್ಷದ ಊರ್ವಿಲ್ ಅವರು ಭಾರತ ತಂಡದ ವಿಕೆಟ್‌ಕೀಪರ್ ರಿಷಭ್ ಪಂತ್ ಅವರ ದಾಖಲೆಯನ್ನು ಮೀರಿದರು.
2018ರ ಟೂರ್ನಿಯಲ್ಲಿ ಪಂತ್ ದೆಹಲಿ ತಂಡದ ಪರ ಹಿಮಾಚಲಪ್ರದೇಶ ವಿರುದ್ಧ 32 ಎಸೆತಗಳಲ್ಲಿ ಶತಕ ದಾಖಲಿಸಿದ್ದರು.
ಸಂಕ್ಷಿಪ್ತ ಸ್ಕೋರು:
ತ್ರಿಪುರ: 20 ಓವರ್‌ಗಳಲ್ಲಿ 8ಕ್ಕೆ155 (ಶ್ರೀಧಾಮ ಪಾಲ್ 57 ಶರತ್ ಶ್ರೀನಿವಾಸ್ 29 ಚಿಂತನ್ ಗಜಾ 18ಕ್ಕೆ2 ನಾಗವಸಾವಲಾ 35ಕ್ಕೆ3)
ಗುಜರಾತ್:10.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 156 (ಆರ್ಯ ದೇಸಾಯಿ 38 ಊರ್ವಿಲ್ ಪಟೇಲ್ ಔಟಾಗದೆ 113 ಮಣಿಶಂಕರ್ ಮುರಾಸಿಂಗ್ 41ಕ್ಕೆ1)
ಫಲಿತಾಂಶ: ಗುಜರಾತ್ ತಂಡಕ್ಕೆ 8 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಊರ್ವಿಲ್ ಪಟೇಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.