
ಚಿತ್ರಕೃಪೆ: imharmanpreet_kaur
ಹರ್ಮನ್‌ಪ್ರೀತ್ ನಾಯಕತ್ವದ ‘ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್’ ಗೆದ್ದು ಬೀಗಿದ್ದಾರೆ. ಈ ಗೆಲುವು ಇಡೀ ಭಾರತೀಯರ ಸಂತಸಕ್ಕೆ ಕಾರಣವಾಗಿತ್ತು. ಇದೀಗ ತಂಡದ ನಾಯಕಿ ಹರ್ಮನ್‌ಪ್ರೀತ್ ‘ವಿಶ್ವಕಪ್’ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ವಿಜಯವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ. ಈ ವಿಷಯದ ಕುರಿತು ಪೋಟೊ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹರ್ಮನ್‌ಪ್ರೀತ್ ಹಾಕಿಸಿಕೊಂಡಿರುವ ಈ ಹಚ್ಚೆಯಲ್ಲಿ, ‘ಐಸಿಸಿ ವಿಶ್ವಕಪ್ ಟ್ರೋಫಿ 2025‘ ಜತೆಗೆ 52 ನಂಬರ್ ಒಳಗೊಂಡಿದೆ. ಇದು ದಕ್ಷಿಣ ಆಫ್ರಿಕಾದ ವಿರುದ್ಧ ವಿಜಯದ ವರ್ಷ ಮತ್ತು ಗೆಲುವಿನ ಅಂತರವನ್ನು ಸೂಚಿಸುವಂತಿದೆ.
ವಿಶ್ವಕಪ್ ಗೆಲುವು ಕುರಿತು ಹಂಚಿಕೊಂಡಿರುವ ಹರ್ಮನ್‌ಪ್ರೀತ್ ಅವರು, ಈ ಹಚ್ಚೆ ಕೈ ಮೇಲೆ ಮಾತ್ರವಲ್ಲ ನನ್ನ ಹೃದಯದಲ್ಲೂ ಶಾಶ್ವತವಾಗಿ ಉಳಿಯಲಿದೆ. ಈ ದಿನಕ್ಕಾಗಿ ನನ್ನ ಕ್ರಿಕೆಟ್ ಪ್ರಯಾಣದ ಆರಂಭದಿಂದಲೂ ಕಾಯುತ್ತಿದ್ದೆ. ಆದರೆ ಈಗ ಆ ಕನಸು ನನಸಾಗಿದೆ’ ನಾನು ಪ್ರತಿದಿನ ಈ ಹಚ್ಚೆ ನೋಡಿ ಸಂತಸ ಪಡುತ್ತೇನೆ ಎಂದಿದ್ದಾರೆ.
ಗೆಲುವಿನ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಹರ್ಮನ್‌ಪ್ರೀತ್, ‘ಕೊನೆಗೂ ಕೈಗೆಟುಕದ ಟ್ರೋಫಿಯನ್ನು ತನ್ನ ಕೈಯಲ್ಲಿ ಹಿಡಿದು ಪುಟ್ಟ ಹುಡುಗಿಯಂತೆ ಸಂಭ್ರಮಿಸಿದ್ದೆ. ನಾವು ಹಲವು ವರ್ಷಗಳಿಂದ ಇದರ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಉತ್ತಮವಾಗಿ ಕ್ರಿಕೆಟ್ ಆಡುತ್ತೇವೆ, ಆದರೆ ನಾವು ಒಂದು ದೊಡ್ಡ ಪಂದ್ಯಾವಳಿಯನ್ನು ಗೆಲ್ಲಬೇಕಾಗಿತ್ತು. ಈಗ ಅದು ಕೂಡ ಈಡೇರಿದೆ‘ ಎಂದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.