ADVERTISEMENT

T20I | ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್: ಚಾಹಲ್ ದಾಖಲೆ ಮುರಿದ ಅರ್ಷದೀಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2025, 14:04 IST
Last Updated 22 ಜನವರಿ 2025, 14:04 IST
<div class="paragraphs"><p>ಅರ್ಷದೀಪ್ ಸಿಂಗ್</p></div>

ಅರ್ಷದೀಪ್ ಸಿಂಗ್

   

(ಚಿತ್ರ ಕೃಪೆ: X/@BCCI)

ಕೋಲ್ಕತ್ತ: ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ದಾಖಲೆಗೆ ಅರ್ಷದೀಪ್ ಸಿಂಗ್ ಭಾಜನರಾಗಿದ್ದಾರೆ.

ADVERTISEMENT

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಕೋಲ್ಕತ್ತ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಎಡಗೈ ವೇಗಿ ಅರ್ಷದೀಪ್ ಈ ದಾಖಲೆ ಬರೆದಿದ್ದಾರೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತದ ಬೌಲರ್‌ಗಳ ಪಟ್ಟಿಯಲ್ಲಿ ಯಜುವೇಂದ್ರ ಚಾಹಲ್ (96 ವಿಕೆಟ್) ಅವರ ದಾಖಲೆಯನ್ನು ಅರ್ಷದೀಪ್ ಸಿಂಗ್ ಮುರಿದಿದ್ದಾರೆ.

61ನೇ ಪಂದ್ಯ ಆಡುತ್ತಿರುವ ಅರ್ಷದೀಪ್ ಈಗಾಗಲೇ 97 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಮೊದಲ ಓವರ್‌ನಲ್ಲೇ ಫಿಲಿಪ್ ಸಾಲ್ಟ್ (0) ವಿಕೆಟ್ ಕಬಳಿಸಿದ ಅರ್ಷದೀಪ್, ಆಂಗ್ಲರ ಪಡೆಗೆ ಆಘಾತ ನೀಡಿದರು. ಇದಾದ ಬೆನ್ನಲ್ಲೇ ಬೆನ್ ಡಕೆಟ್ (4) ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು.

ಟೀಮ್ ಇಂಡಿಯಾ ಪರ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಸಾಧಕರು:

  • ಅರ್ಷದೀಪ್ ಸಿಂಗ್: 97 ವಿಕೆಟ್ (61 ಪಂದ್ಯ)

  • ಯಜುವೇಂದ್ರ ಚಾಹಲ್: 96 ವಿಕೆಟ್ (80 ಪಂದ್ಯ)

  • ಭುವನೇಶ್ವರ್ ಕುಮಾರ್: 90 ವಿಕೆಟ್ (87 ಪಂದ್ಯ)

  • ಜಸ್‌ಪ್ರೀತ್ ಬೂಮ್ರಾ: 89 ವಿಕೆಟ್ (70 ಪಂದ್ಯ)

  • ಹಾರ್ದಿಕ್ ಪಾಂಡ್ಯ: 89 ವಿಕೆಟ್ (110 ಪಂದ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.