ADVERTISEMENT

Sydney Test: ಮತ್ತೆ ಅದೇ ತಪ್ಪು; ಔಟ್‌ಸೈಡ್‌ ಆಫ್‌ ಎಸೆತ ಕೆಣಕಿ ಔಟಾದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2025, 5:46 IST
Last Updated 4 ಜನವರಿ 2025, 5:46 IST
<div class="paragraphs"><p>ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಪಡೆದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ತಂಡ</p></div>

ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಪಡೆದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ತಂಡ

   

ರಾಯಿಟರ್ಸ್‌ ಚಿತ್ರಗಳು

ಸಿಡ್ನಿ: ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಭಾರತದ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ಎದುರಿನ ಬಾರ್ಡರ್‌–ಗವಾಸ್ಕರ್‌ ಟ್ರೋಫಿ (ಬಿಜಿಟಿ) ಟೆಸ್ಟ್ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿಯೂ ಔಟ್‌ಸೈಡ್‌ ಆಫ್‌ ಎಸೆತವನ್ನು ಕೆಣಕಿ ವಿಕೆಟ್‌ ಒಪ್ಪಿಸಿದ್ದಾರೆ.

ADVERTISEMENT

ಎರಡೂ ಇನಿಂಗ್ಸ್‌ಗಳಲ್ಲಿ ಸ್ಕಾಟ್‌ ಬೋಲ್ಯಾಂಡ್‌ಗೆ ವಿಕೆಟ್‌ ಒಪ್ಪಿಸಿರುವ ಅವರು, ತೀವ್ರ ನಿರಾಸೆ ಅನುಭವಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಮೂರನೇ ಸ್ಲಿಪ್‌ನಲ್ಲಿದ್ದ ಬ್ಯೂ ವೆಬ್‌ಸ್ಟರ್‌ಗೆ, ಎರಡನೇಯದ್ದರಲ್ಲಿ 2ನೇ ಸ್ಲಿಪ್‌ನಲ್ಲಿದ್ದ ಸ್ಟೀವ್‌ ಸ್ಮಿತ್‌ಗೆ ಕ್ಯಾಚ್‌ ನೀಡಿದ್ದಾರೆ.

ಇದರೊಂದಿಗೆ, ಅವರ ಇನಿಂಗ್ಸ್‌ ಕೇವಲ 6 ರನ್‌ಗೆ ಅಂತ್ಯವಾಗಿದೆ.

ಸಿಡ್ನಿಯಲ್ಲಿ ನಡೆಯುತ್ತಿರುವ ಪಂದ್ಯವು ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪ್ರವೇಶದ ಹೋರಾಟದಲ್ಲಿ ಉಳಿಯಬೇಕಾದರೆ ಭಾರತ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಹಿಂದಿನ ನಾಲ್ಕು ಬಿಜಿಟಿ ಸರಣಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಆಸ್ಟ್ರೇಲಿಯಾ, ಈ ಬಾರಿ 2–1 ಅಂತರದ ಮುನ್ನಡೆ ಸಾಧಿಸಿದೆ. ಹೀಗಾಗಿ, ಟ್ರೋಫಿ ಜಯಿಸಲು ಈ ಪಂದ್ಯದಲ್ಲಿ ಜಯ ಅಥವಾ ಡ್ರಾ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದಿದೆ. 

ಕೊಹ್ಲಿ ಈ ಟೂರ್ನಿಯುದ್ದಕ್ಕೂ ವಿಕೆಟ್‌ಕೀಪರ್‌ ಇಲ್ಲವೇ ಸ್ಲಿಪ್‌ ಫೀಲ್ಡರ್‌ಗೆ ಕ್ಯಾಚ್‌ ನೀಡಿ ಔಟಾಗಿದ್ದಾರೆ.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 100 ರನ್ ಗಳಿಸಿದ್ದನ್ನು ಬಿಟ್ಟರೆ, ಉಳಿದ 8 ಇನಿಂಗ್ಸ್‌ಗಳಲ್ಲಿ ಒಮ್ಮೆಯೂ ಅರ್ಧಶತಕ ಸಹ ಗಳಿಸಿಲ್ಲ. ಈ ಟೂರ್ನಿಯಲ್ಲಿ ಅವರು ಗಳಿಸಿರುವುದು 190 ರನ್ ಮಾತ್ರ.

ಟೂರ್ನಿಯುದ್ದಕ್ಕೂ ಒಂದೇ ರೀತಿಯಲ್ಲಿ ವಿಕೆಟ್‌ ಒಪ್ಪಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಆಹಾರವಾಗಿದೆ. ನೆಟ್ಟಿಗರು ಕೊಹ್ಲಿಯನ್ನು ಕಾಲೆಳೆಯುತ್ತಿದ್ದಾರೆ.

'ಕೊಹ್ಲಿ ಆಸ್ಟ್ರೇಲಿಯನ್ನರಿಗೆ ಕ್ಯಾಚ್‌ ಪ್ರಾಕ್ಟೀಸ್‌ ಮಾಡಿಸುತ್ತಿದ್ದಾರೆ', 'ಈ ತಪ್ಪು ಪಂದ್ಯದಿಂದ ಪಂದ್ಯಕ್ಕೆ ಕಾಪಿ – ಪೇಸ್ಟ್‌ ಆಗುತ್ತಿದೆ'. 'ರೋಹಿತ್‌ ಶರ್ಮಾ ಜೊತೆ ವಿಶ್ರಾಂತಿ ಪಡೆಯಲಿ', 'ನಿವೃತ್ತಿ ಹೊಂದರಲಿ' ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ.

ಬಾರ್ಡರ್‌–ಗವಾಸ್ಕರ್‌ ಟೂರ್ನಿಯಲ್ಲಿ ಕೊಹ್ಲಿ ಬ್ಯಾಟಿಂಗ್‌

ಪರ್ತ್ ಟೆಸ್ಟ್‌

  • ಮೊದಲ ಇನಿಂಗ್ಸ್‌ 5 ರನ್‌: ಜೋಶ್‌ ಹ್ಯಾಜಲ್‌ವುಡ್‌ ಬೌಲಿಂಗ್‌; ಮೊದಲ ಸ್ಲಿಪ್‌ನಲ್ಲಿದ್ದ ಉಸ್ಮಾನ್‌ ಖ್ವಾಜಾಗೆ ಕ್ಯಾಚ್‌

  • ಎರಡನೇ ಇನಿಂಗ್ಸ್‌: ಅಜೇಯ 100 ರನ್‌

ಅಡಿಲೇಡ್‌ ಟೆಸ್ಟ್‌

  • ಮೊದಲ ಇನಿಂಗ್ಸ್‌ 7 ರನ್‌: ಮಿಚೇಲ್‌ ಸ್ಟಾರ್ಕ್‌ ಬೌಲಿಂಗ್‌; 2ನೇ ಸ್ಲಿಪ್‌ನಲ್ಲಿದ್ದ ಸ್ಟೀವ್‌ ಸ್ಮಿತ್‌ಗೆ ಕ್ಯಾಚ್‌

  • ಎರಡನೇ ಇನಿಂಗ್ಸ್‌11 ರನ್‌: ಸ್ಕಾಟ್‌ ಬೋಲ್ಯಾಂಡ್‌ ಬೌಲಿಂಗ್‌; ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿಗೆ ಕ್ಯಾಚ್‌

ಬ್ರಿಸ್ಬೇನ್‌ ಟೆಸ್ಟ್‌

  • ಮೊದಲ ಇನಿಂಗ್ಸ್‌ 3 ರನ್‌: ಜೋಶ್‌ ಹ್ಯಾಜಲ್‌ವುಡ್‌ ಬೌಲಿಂಗ್‌; ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿಗೆ ಕ್ಯಾಚ್‌

  • ಎರಡನೇ ಇನಿಂಗ್ಸ್‌: ಬ್ಯಾಟಿಂಗ್‌ ಮಾಡಿಲ್ಲ

ಮೆಲ್ಬರ್ನ್‌ ಟೆಸ್ಟ್‌

  • ಮೊದಲ ಇನಿಂಗ್ಸ್‌ 36 ರನ್‌: ಸ್ಕಾಟ್‌ ಬೋಲ್ಯಾಂಡ್‌ ಬೌಲಿಂಗ್‌; ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿಗೆ ಕ್ಯಾಚ್‌

  • ಎರಡನೇ ಇನಿಂಗ್ಸ್‌ 5 ರನ್‌: ಮಿಚೇಲ್‌ ಸ್ಟಾರ್ಕ್‌ ಬೌಲಿಂಗ್‌; ಮೊದಲ ಸ್ಲಿಪ್‌ನಲ್ಲಿದ್ದ ಉಸ್ಮಾನ್‌ ಖ್ವಾಜಾಗೆ ಕ್ಯಾಚ್‌

ಸಿಡ್ನಿ ಟೆಸ್ಟ್‌

  • ಮೊದಲ ಇನಿಂಗ್ಸ್‌ 17 ರನ್‌: ಸ್ಕಾಟ್‌ ಬೋಲ್ಯಾಂಡ್‌ ಬೌಲಿಂಗ್‌; ಮೂರನೇ ಸ್ಲಿಪ್‌ನಲ್ಲಿದ್ದ ಬ್ಯೂ ವೆಬ್‌ಸ್ಟರ್‌ಗೆ ಕ್ಯಾಚ್‌

  • ಎರಡನೇ ಇನಿಂಗ್ಸ್‌ನಲ್ಲಿ 6 ರನ್‌: ಸ್ಕಾಟ್‌ ಬೋಲ್ಯಾಂಡ್‌ ಬೌಲಿಂಗ್‌; 2ನೇ ಸ್ಲಿಪ್‌ನಲ್ಲಿದ್ದ ಸ್ಟೀವ್‌ ಸ್ಮಿತ್‌ಗೆ ಕ್ಯಾಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.