ADVERTISEMENT

ದ.ಆಫ್ರಿಕಾ ವಿರುದ್ಧದ ಮೊದಲ ಪಂ‌ದ್ಯಕ್ಕೆ ಯುವ ಆಲ್‌ರೌಂಡರ್ ಬದಲು ಜುರೆಲ್‌ಗೆ ಅವಕಾಶ

ಪಿಟಿಐ
Published 12 ನವೆಂಬರ್ 2025, 9:36 IST
Last Updated 12 ನವೆಂಬರ್ 2025, 9:36 IST
<div class="paragraphs"><p>ಧ್ರುವ್ ಜುರೆಲ್</p></div>

ಧ್ರುವ್ ಜುರೆಲ್

   

ಕೋಲ್ಕತ್ತ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡರ್ ನಿತೀಶ್ ಕುಮಾರ್ ಬದಲು ವಿಕೆಟ್ ಕೀಪರ್, ಬ್ಯಾಟರ್ ಧ್ರುವ್ ಜುರೆಲ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಶೆ ಬುಧವಾರ ತಿಳಿಸಿದ್ದಾರೆ.

ಶುಕ್ರವಾರ ಕೋಲ್ಕತ್ತದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಕುರಿತು ಮಾತನಾಡಿದ ರಯಾನ್ ಟೆನ್ ಡೋಶೆ, ‘ಕಳೆದ 6 ತಿಂಗಳಲ್ಲಿ ಧ್ರುವ್ ಆಡಿರುವ ರೀತಿ ಮತ್ತು ಕಳೆದ ವಾರ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಅವರು ಸಿಡಿಸಿದ 2 ಶತಗಳನ್ನು ನೋಡಿದರೆ, ಅವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ’ ಎಂದಿದ್ದಾರೆ.

ADVERTISEMENT

‘ಪಂದ್ಯ ಗೆಲ್ಲಲು ಬೇಕಾದ ತಂತ್ರಗಳನ್ನು ರೂಪಿಸುವುದು ನಮ್ಮ ಆದ್ಯತೆಯ ವಿಚಾರವಾಗಿದೆ. ಹಾಗೆಂದು ನಿತೀಶ್ ಕುಮಾರ್ ಮೇಲಿನ ನಮ್ಮ ಒಲವು ಕಡಿಮೆಯಾಗಿದೆ ಎಂಬ ಅರ್ಥವಲ್ಲ. ಆದರೆ ಈ ಸರಣಿಯ ಪ್ರಾಮುಖ್ಯತೆ ಮತ್ತು ಪರಿಸ್ಥಿತಿಗಳನ್ನು ಗಮನಿಸಿದರೆ ನಿತೀಶ್ ಕುಮಾರ್ ರೆಡ್ಡಿ ತಂಡದಲ್ಲಿ ಆಡುವುದು ಬಹುತೇಕ ಖಚಿತ’ ಎಂದು ಅವರು ಹೇಳಿದ್ದಾರೆ.

ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಮರಳಿರುವುದರಿಂದ ಧ್ರುವ್ ಜುರೆಲ್ ಪರಿಪೂರ್ಣ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಧ್ರುವ್ ಕೊನೆಯ 8 ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.