ADVERTISEMENT

ಬಿಡ್ಡಿಂಗ್ ವೇಳೆ ಕುಸಿದು ಬಿದ್ದಿದ್ದ ಹರಾಜುದಾರ ಹಗ್ ಆರೋಗ್ಯವಾಗಿದ್ದಾರೆ: ಐಪಿಎಲ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 9:32 IST
Last Updated 13 ಫೆಬ್ರುವರಿ 2022, 9:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ವೇಳೆ ಕುಸಿದು ಬಿದ್ದಿದ್ದ ಹರಾಜುದಾರ ಹಗ್ ಎಡ್ಮೀಡ್ಸ್ ಅವರು ಆರೋಗ್ಯವಾಗಿದ್ದಾರೆ ಎಂದು ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

15ನೇ ಆವೃತ್ತಿಯ ಟೂರ್ನಿಗಾಗಿಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೊದಲ ದಿನ (ಶನಿವಾರ) ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದ ಹಗ್ ಎಡ್ಮೀಡ್ಸ್ ವೇದಿಕೆಯಲ್ಲೇ ಹಠಾತ್ತನೆ ಕುಸಿದು ಬಿದ್ದಿದ್ದರು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಬಿಡ್ಡಿಂಗ್ ಅನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಬಳಿಕಹಗ್ ಅವರ ಅನುಪಸ್ಥಿತಿಯಲ್ಲಿ, ಚಾರು ಶರ್ಮಾ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ADVERTISEMENT

ಸದ್ಯ ಹಗ್ ಚೇತರಿಸಿಕೊಂಡಿದ್ದು, ಸ್ವತಃ ಅವರೇ ಮಾತನಾಡಿರುವ ವಿಡಿಯೊವನ್ನು 'ಐಪಿಎಲ್' ಹಂಚಿಕೊಂಡಿದೆ. ಘಟನೆ ಕುರಿತು ವಿಷಾಧಿಸಿರುವ ಹರಾಜುದಾರ, ಸದ್ಯ ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.