ADVERTISEMENT

IPL 2022: ಅಭ್ಯಾಸದ ಅವಧಿಯಲ್ಲಿ ಧೋನಿಯನ್ನು ತಬ್ಬಿಕೊಂಡ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2022, 10:22 IST
Last Updated 26 ಮಾರ್ಚ್ 2022, 10:22 IST
ಚಿತ್ರ ಕೃಪೆ: Twitter/@RCBTweets
ಚಿತ್ರ ಕೃಪೆ: Twitter/@RCBTweets   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.

ಈ ನಡುವೆ ಮಹೇಂದ್ರ ಸಿಂಗ್ ಧೋನಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭೇಟಿಯಾಗಿದ್ದಾರೆ.

ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ಶುಕ್ರವಾರ ಅಭ್ಯಾಸದ ಅವಧಿಯಲ್ಲಿ ಧೋನಿ ಬಳಿ ತೆರಳಿರುವ ಕೊಹ್ಲಿ ತಬ್ಬಿಕೊಂಡಿದ್ದಾರೆ. ಬಳಿಕ ಸಂಭಾಷಣೆ ನಡೆಸಿದ್ದಾರೆ.

ಕೊಹ್ಲಿ ಹಾಗೂ ಧೋನಿ ಪರಸ್ಪರ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದಾರೆ. ಕೊಹ್ಲಿ ವೃತ್ತಿ ಜೀವನದ ಏಳಿಗೆಯಲ್ಲಿ ಮಹಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಇಬ್ಬರು ನಾಯಕತ್ವವನ್ನು ತೊರೆದಿದ್ದು, ತಮ್ಮ ತಮ್ಮ ಫ್ರಾಂಚೈಸ್‌ಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಫಫ್ ಡು ಪ್ಲೆಸಿ ಹಾಗೂ ಚೆನ್ನೈ ತಂಡವನ್ನು ರವೀಂದ್ರ ಜಡೇಜ ಮುನ್ನಡೆಸುತ್ತಿದ್ದಾರೆ.

ಧೋನಿ ನಾಯಕತ್ವವನ್ನು ತ್ಯಜಿಸಿದಾಗ ಟ್ವೀಟ್ ಮಾಡಿದ್ದ ಕೊಹ್ಲಿ, ಅಭಿಮಾನಿಗಳು ಮರೆಯಲಾಗದ ಅಧ್ಯಾಯವಿದು, ಎಂದಿಗೂ ಗೌರವಿಸುತ್ತೇನೆ ಎಂದು ಹೇಳಿದ್ದರು.

ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿರುವ ಆರ್‌ಸಿಬಿ ಭಾನುವಾರ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.