ADVERTISEMENT

IPL 2025 | ಅತಿಹೆಚ್ಚು ಔಟ್ ಮಾಡಿದ ಸಾಧನೆ: ಐಪಿಎಲ್‌ನಲ್ಲಿ ದಾಖಲೆ ಬರೆದ ಧೋನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಏಪ್ರಿಲ್ 2025, 16:26 IST
Last Updated 14 ಏಪ್ರಿಲ್ 2025, 16:26 IST
<div class="paragraphs"><p>ಎಂ.ಎಸ್‌. ಧೋನಿ</p></div>

ಎಂ.ಎಸ್‌. ಧೋನಿ

   

ಪಿಟಿಐ ಚಿತ್ರ

ಲಖನೌ: ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕ ಎಂ.ಎಸ್‌. ಧೋನಿ ಅವರು ಐಪಿಎಲ್‌ನಲ್ಲಿ ವಿಕೆಟ್‌ ಕೀಪಿಂಗ್‌/ಕ್ಷೇತ್ರರಕ್ಷಣೆ ವೇಳೆ 200 ಅಥವಾ ಅದಕ್ಕಿಂತ ಹೆಚ್ಚು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ ಮೊದಲ ಆಟಗಾರ ಎನಿಸಿಕೊಂಡರು.

ADVERTISEMENT

ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡದ ಆಯುಷ್‌ ಬದೋನಿ ಅವರನ್ನು 14ನೇ ಓವರ್‌ನಲ್ಲಿ ಸ್ಟಂಪ್‌ ಔಟ್‌ ಮಾಡುವ ಮೂಲಕ ಧೋನಿ, ದ್ವಿಶತಕದ ಗಡಿ ದಾಟಿದರು. ಕೊನೇ ಓವರ್‌ನಲ್ಲಿ ನಾಯಕ ರಿಷಭ್‌ ಪಂತ್‌ ಅವರ ಕ್ಯಾಚ್‌ ಸಹ ಪಡೆದು, ವಿಕೆಟ್‌ ಗಳಿಕೆಯನ್ನು 201ಕ್ಕೆ ಏರಿಸಿಕೊಂಡರು.

ಧೋನಿ ನಂತರದ ಸ್ಥಾನದಲ್ಲಿರುವ ದಿನೇಶ್‌ ಕಾರ್ತಿಕ್‌ 182 ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ. ಉಳಿದಂತೆ ಎಬಿ ಡಿ ವಿಲಿಯರ್ಸ್‌ (126), ರಾಬಿನ್‌ ಉತ್ತಪ್ಪ (124), ವೃದ್ಧಿಮಾನ್‌ ಸಾಹ (118) ಹಾಗೂ ವಿರಾಟ್‌ ಕೊಹ್ಲಿ (116 ) ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಇದ್ದಾರೆ.

ಚೆನ್ನೈಗೆ 167 ರನ್‌ ಗುರಿ
ಲಖನೌನ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್‌ ಕಲೆಹಾಕಿದೆ.

ಸತತ ಐದು ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ತಂಡ, ಈ ಪಂದ್ಯವನ್ನು ಗೆದ್ದು ಜಯದ ಹಾದಿಗೆ ಮರಳುವ ಲೆಕ್ಕಾಚಾರದಲ್ಲಿದೆ. ಈ ಪಂದ್ಯವನ್ನು ಗೆದ್ದರೆ, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಎಲ್‌ಎಸ್‌ಜಿಗೆ ಇದೆ. ಹೀಗಾಗಿ, ಪಂದ್ಯ ಕುತೂಹಲ ಮೂಡಿಸಿದೆ.

ಸದ್ಯ ಗುರಿ ಬೆನ್ನತ್ತಿರುವ ಸಿಎಸ್‌ಕೆ, 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 37 ರನ್‌ ಗಳಿಸಿದೆ. ರಚಿನ್‌ ರವೀಂದ್ರ (15 ರನ್‌) ಮತ್ತು ಶೈಕ್‌ ರಶೀದ್ (22 ರನ್‌) ಕ್ರೀಸ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.