ADVERTISEMENT

IPL 2025 | RCB vs PBKS: ಮಾಜಿ ಆಟಗಾರರಿಂದಲೇ ಆರ್‌ಸಿಬಿಗೆ ಸವಾಲು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2025, 13:30 IST
Last Updated 18 ಏಪ್ರಿಲ್ 2025, 13:30 IST
<div class="paragraphs"><p>ಆರ್‌ಸಿಬಿ ಲೋಗೊ,&nbsp;ಯಜುವೇಂದ್ರ ಚಾಹಲ್, ಪಂಜಾಬ್‌ ಕಿಂಗ್ಸ್‌ ಲೋಗೊ, ಮಾರ್ಕಸ್‌ ಸ್ಟೋಯಿನಸ್‌. ಗ್ಲೆನ್‌ ಮ್ಯಾಕ್ಸ್‌ವೆಲ್‌&nbsp;ಮತ್ತು&nbsp;ವೈಶಾಕ್‌ ವಿಜಯಕುಮಾರ್</p></div>

ಆರ್‌ಸಿಬಿ ಲೋಗೊ, ಯಜುವೇಂದ್ರ ಚಾಹಲ್, ಪಂಜಾಬ್‌ ಕಿಂಗ್ಸ್‌ ಲೋಗೊ, ಮಾರ್ಕಸ್‌ ಸ್ಟೋಯಿನಸ್‌. ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ವೈಶಾಕ್‌ ವಿಜಯಕುಮಾರ್

   

ಚಿತ್ರಕೃಪೆ: IPL / X 

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಪಂಜಾಬ್‌ ಕಿಂಗ್ಸ್‌ (ಪಿಬಿಕೆಎಸ್‌) ಸೆಣಸಾಟಕ್ಕೆ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.

ADVERTISEMENT

ಕೆಲ ವರ್ಷಗಳ ಹಿಂದೆ ಆರ್‌ಸಿಬಿಯಲ್ಲೇ ಇದ್ದ ಆಟಗಾರರು, ಈ ಬಾರಿ ಪಂಜಾಬ್‌ ಪರ ಕಣಕ್ಕಿಳಿಯುತ್ತಿದ್ದು, ಅವರು ಇಂದು ತವರಿನಂಗಳದಲ್ಲಿ 'ಬೋಲ್ಡ್‌' ಆರ್ಮಿಗೆ ಸವಾಲೊಡ್ಡುವ ಸಾಧ್ಯತೆ ಇದೆ.

2014ರಿಂದ ಆರ್‌ಸಿಬಿ ಪರ ಆಡಿದ್ದ ಯಜುವೇಂದ್ರ ಚಾಹಲ್ ಅವರು, ಈ ಬಾರಿ ಪಂಜಾಬ್‌ ಪಡೆಯ 'ಟ್ರಂಪ್‌ ಕಾರ್ಡ್‌' ಆಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಮುಲ್ಲನಪುರದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ನಾಲ್ಕು ವಿಕೆಟ್‌ ಪಡೆದು ಮಿಂಚಿದ್ದ ಅವರು, ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಶ್ರೇಯವನ್ನೂ ಹೊಂದಿದ್ದಾರೆ.

2016ರಲ್ಲಿ ಆರ್‌ಸಿಬಿ ಫೈನಲ್‌ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, 2022–2024ರ ವರೆಗೆ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದರು.

2023ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಕನ್ನಡಿಗ ವೈಶಾಕ್‌ ವಿಜಯಕುಮಾರ್‌, ಕಳೆದ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಆಡಿದ್ದರು. ಅವರಿಗೂ ಚಿನ್ನಸ್ವಾಮಿ ಕ್ರೀಡಾಂಗಣ ಚಿರಪರಿಚಿತ. ಹಾಗಾಗಿ, ಪಂಜಾಬ್‌ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಅವರಲ್ಲೂ ಇದೆ.

ಉಳಿದಂತೆ, ಆಸ್ಟ್ರೇಲಿಯಾದ ಆಲ್‌ರೌಂಡರ್‌ಗಳಾದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಸ್‌ ನ್ಯೂಜಿಲೆಂಡ್‌ನ ವೇಗಿ ಲಾಕಿ ಫರ್ಗ್ಯೂಸನ್‌ ಅವರಿಗೂ ಆರ್‌ಸಿಬಿ ಬಗ್ಗೆ ಚೆನ್ನಾಗಿ ತಿಳಿದಿದೆ. ಬೆಂಗಳೂರಿನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.