ADVERTISEMENT

IPL 2025 | ಅಮೋಘ ಬ್ಯಾಟಿಂಗ್; ಈ ಆವೃತ್ತಿಯಲ್ಲಿ 500 ರನ್ ಪೂರೈಸಿದ ಸುದರ್ಶನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2025, 16:28 IST
Last Updated 2 ಮೇ 2025, 16:28 IST
   

ಅಹಮದಾಬಾದ್‌: ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿರುವ ಗುಜರಾತ್‌ ಟೈಟನ್ಸ್‌ ತಂಡದ ಸಾಯಿ ಸುದರ್ಶನ್‌, ಪ್ರಸಕ್ತ ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ 500 ರನ್‌ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡರು.

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಇಂದು (ಶುಕ್ರವಾರ) ನಡೆಯುತ್ತಿರುವ ಪಂದ್ಯದಲ್ಲಿ ಕೇವಲ 23 ಎಸೆತಗಳನ್ನು ಎದುರಿಸಿದ ಸುದರ್ಶನ್‌ 9 ಬೌಂಡರಿ ಸಹಿತ 48 ರನ್‌ ಚಚ್ಚಿದರು. ಇದರೊಂದಿಗೆ, ಈ ಆವೃತ್ತಿಯಲ್ಲಿ ಅವರು ಗಳಿಸಿದ ರನ್‌ ಸಂಖ್ಯೆಯನ್ನು 504ಕ್ಕೆ ಏರಿಸಿಕೊಂಡರು.

ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿ 'ಆರೆಂಜ್‌ ಕ್ಯಾಪ್‌' ಗಳಿಸಿಕೊಂಡಿರುವ ಅವರು, ಟೂರ್ನಿಯಲ್ಲಿ ಆಡಿರುವ ಒಟ್ಟು 10 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿದ್ದಾರೆ. 82 ರನ್‌ ಈ ಆವೃತ್ತಿಯಲ್ಲಿ ಅವರ ಗರಿಷ್ಠ ಮೊತ್ತವಾಗಿದೆ. 16 ಸಿಕ್ಸರ್ ಮತ್ತು 55 ಬೌಂಡರಿ ಅವರ ಬ್ಯಾಟ್‌ನಿಂದ ಬಂದಿವೆ.

ADVERTISEMENT

ಐಪಿಎಲ್‌–2025ರಲ್ಲಿ ಗರಿಷ್ಠ ರನ್ ಗಳಿಸಿದ ಐವರು

  • ಸಾಯಿ ಸುದರ್ಶನ್‌ (ಗುಜರಾತ್‌ ಟೈಟನ್ಸ್‌) – 504 ರನ್‌ (10 ಇನಿಂಗ್ಸ್‌)

  • ಸೂರ್ಯಕುಮಾರ್‌ ಯಾದವ್‌ (ಮುಂಬೈ ಇಂಡಿಯನ್ಸ್‌) – 475 ರನ್‌ (11 ಇನಿಂಗ್ಸ್‌)

  • ಜಾಸ್‌ ಬಟ್ಲರ್‌ (ಗುಜರಾತ್‌ ಟೈಟನ್ಸ್‌) – 470 ರನ್‌ (10 ಇನಿಂಗ್ಸ್‌)

  • ಶುಭಮನ್‌ ಗಿಲ್ (ಗುಜರಾತ್‌ ಟೈಟನ್ಸ್‌) – 465 ರನ್‌ (10 ಇನಿಂಗ್ಸ್‌)

  • ವಿರಾಟ್‌ ಕೊಹ್ಲಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) – 443 ರನ್‌ (10 ಇನಿಂಗ್ಸ್‌)

ರೈಸರ್ಸ್‌ಗೆ 225 ರನ್‌ ಗುರಿ
ಸಾಯಿ ಸುದರ್ಶನ್‌, ನಾಯಕ ಶುಭಮನ್ ಗಿಲ್‌ (76 ರನ್‌) ಹಾಗೂ ಜಾಸ್‌ ಬಟ್ಲರ್‌ (64 ರನ್) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಗುಜರಾತ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 224 ರನ್‌ ಗಳಿಸಿದೆ. 225 ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್, 3 ಓವರ್‌ಗಳ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 33 ರನ್ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.