
ಐಪಿಎಲ್ ಹರಾಜು ಪ್ರಕ್ರಿಯೆ
ಕೃಪೆ: X / @IPL
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆ ಮಂಗಳವಾರ ಮುಗಿದಿದೆ. ಇದರೊಂದಿಗೆ ಎಲ್ಲ ತಂಡಗಳು 2026ರ ಆವೃತ್ತಿಗೆ ಸಜ್ಜಾಗುತ್ತಿವೆ.
ಅಬುಧಾಬಿಯಲ್ಲಿ ನಡೆದ ಬಿಡ್‌ಗೆ 246 ಭಾರತೀಯರು ಮತ್ತು 113 ವಿದೇಶಿಯರು ಸೇರಿದಂತೆ ಒಟ್ಟು 369 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 245 ಮಂದಿ ಅನ್‌ಕ್ಯಾಪ್ಡ್ ಆಟಗಾರರು ಎಂಬುದು ವಿಶೇಷ.
ಇಷ್ಟು ಆಟಗಾರರ ಪೈಕಿ ಬಿಕರಿಯಾದವರು 77 ಮಂದಿಯಷ್ಟೇ. ಉಳಿದವರು ಯಾವ ತಂಡಕ್ಕೂ ಬೇಡವಾಗಿದ್ದಾರೆ.
ಹೆಚ್ಚು ಆಟಗಾರರನ್ನು ಖರೀದಿಸಿದ ರೈಡರ್ಸ್
ಐಪಿಎಲ್‌ನಲ್ಲಿ ಆಡುವ 10 ತಂಡಗಳ ಪೈಕಿ ಹೆಚ್ಚು ಆಟಗಾರರನ್ನು ಖರೀದಿಸಿದ್ದು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್). ಆರು ಮಂದಿ ವಿದೇಶಿಯರು ಸೇರಿದಂತೆ 13 ಆಟಗಾರರು ಕೆಕೆಆರ್ ಪಾಲಾಗಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) 10 ಆಟಗಾರರು, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಲಾ 9 ಮಂದಿಗೆ ಸ್ವಾಗತ ಕೋರಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಲಾ ಎಂಟು ಆಟಗಾರರನ್ನು ಖರೀದಿಸಿವೆ. ಉಳಿದಂತೆ ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 6 ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಲಾ ಐವರಿಗೆ, ಪಂಜಾಬ್ ಕಿಂಗ್ಸ್ ನಾಲ್ವರಿಗೆ ಮಣೆ ಹಾಕಿವೆ.
ಹಿಂದಿನ ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಆಡಿದ್ದ ಮಯಂಕ್ ಅಗರವಾಲ್, ಉಮೇಶ್ ಯಾದವ್, ಅಲ್ಜಾರಿ ಜೋಸೆಫ್, ಸ್ವಸ್ತಿಕ್ ಛಿಕಾರ ಅವರು ಮಾರಾಟವಾಗದೆ ಉಳಿದವರ ಲಿಸ್ಟ್‌ನಲ್ಲಿದ್ದಾರೆ.
ಮಾರಾಟವಾಗದ ಪ್ರಮುಖ ಆಟಗಾರರು
₹ 2 ಕೋಟಿ ಮೂಲ ಬೆಲೆ
ಡೆವೋನ್ ಕಾನ್ವೆ – ನ್ಯೂಜಿಲೆಂಡ್
ಜೇಕ್ ಫ್ರೆಸರ್ ಮೆಕ್‌ಗರ್ಕ್ – ಆಸ್ಟ್ರೇಲಿಯಾ
ಜೆರಾಲ್ಡ್ ಕೋಜಿ – ದಕ್ಷಿಣ ಆಫ್ರಿಕಾ
ಮಹೀಷ ತೀಕ್ಷಣ – ಶ್ರೀಲಂಕಾ
ಸ್ವೀವ್ ಸ್ಮಿತ್ – ಆಸ್ಟ್ರೇಲಿಯಾ
ಡೆರಿಲ್ ಮಿಚೇಲ್ – ನ್ಯೂಜಿಲೆಂಡ್
ಶಾಯ್ ಹೋಪ್ – ವೆಸ್ಟ್ ಇಂಡೀಸ್
ಅಲ್ಜಾರಿ ಜೋಸೆಫ್ – ವೆಸ್ಟ್ ಇಂಡೀಸ್
₹ 1.50 ಕೋಟಿ ಮೂಲ ಬೆಲೆ
ರಹಮನುಲ್ಲಾ ಗುರ್ಬಾಜ್ – ಅಫ್ಗಾನಿಸ್ತಾನ
ಉಮೇಶ್ ಯಾದವ್ – ಭಾರತ
₹ 1 ಕೋಟಿ ಮೂಲ ಬೆಲೆ
ಜಾನಿ ಬೆಸ್ಟೋ – ಇಂಗ್ಲೆಂಡ್
75 ಲಕ್ಷ ಮೂಲ ಬೆಲೆ
ದೀಪಕ್ ಹೂಡ – ಭಾರತ
ಮಯಂಕ್ ಅಗರವಾಲ್ – ಭಾರತ
30 ಲಕ್ಷ ಮೂಲಬೆಲೆ
ಅಭಿನವ್ ಮನೋಹರ್ – ಭಾರತ
ವಿಜಯ್ ಶಂಕರ್ – ಭಾರತ
ಸ್ವಸ್ತಿಕ್ ಛಿಕಾರ – ಭಾರತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.