ಶ್ರೀಲಂಕಾ ವೇಗಿ ಮತೀಶಾ ಪತಿರಾಣ
ಚಿತ್ರ: @BhttDNSH100
ಅಬುಧಾಬಿ: ಇಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಸಾಲಿನ ಮಿನಿ ಹರಾಜಿನಲ್ಲಿ ಶ್ರೀಲಂಕಾದ ಮಧ್ಯಮ ವೇಗದ ಬೌಲರ್ ಮತೀಶಾ ಪತಿರಾಣ ಅತ್ಯಧಿಕ ಮೊತ್ತಕ್ಕೆ ಹರಾಜಾಗುವ ಮೂಲಕ ದಾಖಲೆ ಬರೆದಿದ್ದಾರೆ.
ಮತೀಶಾ ಪತಿರಾಣ ಅವರನ್ನು ಕೊಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿ ₹18 ಕೋಟಿ ನೀಡಿ ಖರೀದಿಸಿದೆ. ಇವರನ್ನು ಖರೀದಿಸಿಲು, ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ಫ್ರಾಂಚೈಸಿಗಳು ಪೈಪೋಟಿ ನಡೆಸಿದರು.
ಆದರೆ, ರಾಜಸ್ಥಾನ ರಾಯಲ್ಸ್ ಬಿಡ್‌ನಿಂದ ಹೊರಹೋದ ಬೆನ್ನಲ್ಲೆ ಬಿಡ್‌ಗಿಳಿದ ಕೆಕೆಆರ್, ಲಖನೌ ಜೊತೆ ಪೈಪೋಟಿ ನಡೆಸಿ ಅಂತಿಮವಾಗಿ ಪತಿರಾಣ ಅವರನ್ನು ₹18 ಕೋಟಿ ಮೊತ್ತ ನೀಡಿ ಖರೀದಿಸಿತು. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಶ್ರೀಲಂಕಾ ಆಟಗಾರನೊಬ್ಬ ಪಡೆದ ಅತ್ಯಧಿಕ ಮೊತ್ತವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ ಮೂರು ಸೀಸನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರುವ ಮತೀಶಾ ಪತಿರಾಣ, ಗಮನಾರ್ಹ ಪ್ರದರ್ಶನ ತೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.