ADVERTISEMENT

ವಿರಾಟ್ ಕೊಹ್ಲಿ ಚಿತ್ರ ಹಂಚಿಕೊಂಡ WWE ಸ್ಟಾರ್ ಜಾನ್ ಸೀನಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 5:36 IST
Last Updated 10 ಏಪ್ರಿಲ್ 2025, 5:36 IST
<div class="paragraphs"><p>ವಿರಾಟ್‌ ಕೊಹ್ಲಿ</p></div>

ವಿರಾಟ್‌ ಕೊಹ್ಲಿ

   

ಪಿಟಿಐ ಚಿತ್ರ

ಭಾರತ ಕ್ರಿಕೆಟ್‌ ತಂಡದ ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಅವರ ಚಿತ್ರವನ್ನು ನಟ ಹಾಗೂ ಡಬ್ಲ್ಯೂಡಬ್ಲ್ಯೂಇ (WWE) ಸ್ಟಾರ್ ಜಾನ್‌ ಸೀನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಐಪಿಎಲ್‌ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಕಾಯಂ ಆಟಗಾರನಾಗಿರುವ ಕೊಹ್ಲಿ, ಇತ್ತೀಚೆಗೆ 'ಚಾಂಪಿಯನ್‌ ರಿಂಗ್‌' ತೊಟ್ಟು ಜಾನ್‌ ಸೀನಾ ಅವರ ಸಿಗ್ನೇಚರ್‌ ಸ್ಟೈಲ್‌ 'ಯು ಕಾಂಟ್‌ ಸೀ ಮೀ' ಪೋಸ್‌ ನೀಡಿದ್ದರು. ಈ ಉಂಗುರವನ್ನು, 2024ರ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರರಿಗೆ ಬಿಸಿಸಿಐ ನೀಡಿತ್ತು.

ಕೊಹ್ಲಿ ಪೋಸ್‌ ನೀಡಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರ ಹಾಗೂ ವಿಡಿಯೊವನ್ನು ಆರ್‌ಸಿಬಿ ತನ್ನ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಹಂಚಿಕೊಂಡಿದೆ.

ಇನ್‌ಸ್ಟಾಗ್ರಾಂನಲ್ಲಿ ಆರ್‌ಸಿಬಿ ಹಂಚಿಕೊಂಡಿದ್ದ ಚಿತ್ರವನ್ನು ಸೀನಾ ತಮ್ಮ ಪುಟದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

'ಕೊಹ್ಲಿ ಶ್ರೇಷ್ಠ ಆಟಗಾರ', 'ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಮತ್ತೊಬ್ಬ ಸಾರ್ವಕಾಲಿಕ ಶ್ರೇಷ್ಠ ಗುರುತಿಸಿದ್ದಾನೆ' ಎಂಬಿತ್ಯಾದಿ ಪ್ರತಿಕ್ರಿಯೆಗಳನ್ನು ಹಾಕಿದ್ದಾರೆ.

ಕೆಲವರು 'ಈ ಸಲ ಕಪ್ ನಮ್ದೇ' ಎಂದಿದ್ದರೆ, ಇನ್ನೂ ಕೆಲವರು 'ಯು ಕಾಂಟ್‌ ಸೀ ಆರ್‌ಸಿಬಿ ಟ್ರೋಫಿ' ಎಂದು ಕಾಲೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.