ADVERTISEMENT

'ಈ ಸಲ ಕಪ್ ನಮ್ದು': ಕೊಹ್ಲಿ, ರಜತ್‌ಗೂ ಮೊದಲು ಈ ಮಾತು ಹೇಳಿದ್ದು ಯಾರು ಗೊತ್ತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2025, 7:11 IST
Last Updated 4 ಜೂನ್ 2025, 7:11 IST
<div class="paragraphs"><p>ಐಪಿಎಲ್‌ 2025 ಟ್ರೋಫಿಯೊಂದಿಗೆ ವಿರಾಟ್‌ ಕೊಹ್ಲಿ ಹಾಗೂ&nbsp;ರಜತ್‌ ಪಾಟೀದಾರ್‌</p></div>

ಐಪಿಎಲ್‌ 2025 ಟ್ರೋಫಿಯೊಂದಿಗೆ ವಿರಾಟ್‌ ಕೊಹ್ಲಿ ಹಾಗೂ ರಜತ್‌ ಪಾಟೀದಾರ್‌

   

ಪಿಟಿಐ ಚಿತ್ರ

ಐಪಿಎಲ್‌–2025 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ, 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಿದೆ.

ADVERTISEMENT

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಫೈನಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸುವ ಮೂಲಕ, ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ.

ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಪಂದ್ಯದ ಬಳಿಕ 'ಈ ಸಲ ಕಪ್‌ ನಮ್ದು' ಎಂದು ಹೇಳಿದ್ದಾರೆ. ಜೊತೆಯಲ್ಲಿದ್ದ ಮಾಜಿ ಕ್ರಿಕೆಟಿಗರಾದ ಎಬಿ ಡಿ ವಿಲಿಯರ್ಸ್‌ ಹಾಗೂ ಕ್ರಿಸ್‌ ಗೇಲ್‌ ಅವರಿಂದಲೂ ಅದನ್ನು ಹೇಳಿಸಿ ಸಂಭ್ರಮಿಸಿದ್ದಾರೆ.

ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಜತ್‌ ಪಾಟೀದಾರ್‌ ಅವರೂ ಅಭಿಮಾನಿಗಳನ್ನುದ್ದೇಶಿಸಿ 'ಈ ಸಲ ಕಪ್‌ ನಮ್ದು' ಎಂದು ಹರ್ಷಿಸಿದ್ದಾರೆ.

ಕೊಹ್ಲಿ, ರಜತ್‌ ಹೀಗೆ ಹೇಳಿದಾಗ ಕ್ರೀಡಾಂಗಣದಲ್ಲಿದ್ದವರು ಹರ್ಷೋದ್ಘಾರ ಮಾಡಿದ್ದಾರೆ.

'ನಮ್ದು' ಎಂದಿದ್ದ ಮಂದಾನ
ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ತಂಡ ಮುನ್ನಡೆಸುವ ಸ್ಮೃತಿ ಮಂದಾನ ಮೊದಲು ಹೀಗೆ ಹೇಳಿದ್ದರು.

'ಈ ಸಲ ಕಪ್‌ ನಮ್ದೇ' ಎಂಬುದಾಗಿ ಆರ್‌ಸಿಬಿ ಅಭಿಮಾನಿಗಳು ಹಲವು ವರ್ಷಗಳಿಂದಲೂ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಆರ್‌ಸಿಬಿ ತಂಡ ಪದೇ ಪದೇ ವೈಫಲ್ಯ ಅನುಭವಿಸಿದಾಗಲೂ 'ಕಪ್‌' ಕ್ರೇಜ್‌ ಮಾತ್ರ ಕಮ್ಮಿಯಾಗಿರಲಿಲ್ಲ.

2023ರಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ನ ಮೊದಲ ಆವೃತ್ತಿ ಆರಂಭವಾದಾಗಲೂ 'ಕಪ್‌' ಕೂಗು ಜೋರಾಗಿಯೇ ಕೇಳಿತ್ತು.

ಮೊದಲ ಆವೃತ್ತಿಯಲ್ಲಿ ಮುಗ್ಗರಿಸಿದರೂ, ಎರಡನೇ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳೆಯರು ಚಾಂಪಿಯನ್‌ ಪಟ್ಟಕ್ಕೇರಿದರು. ಆ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರೋಫಿ ಸ್ವೀಕರಿಸುವುದಕ್ಕೂ ಮುನ್ನ ನಾಯಕಿ ಮಂದಾನ 'ಈ ಸಲ ಕಪ್‌ ನಮ್ದು' ಎಂದು ಖಚಿತವಾಗಿ ಹೇಳಿದ್ದರು.

ಅದೇ ಮಾತನ್ನು ಕೊಹ್ಲಿ, ರಜತ್‌ ಈಗ ಪುನರುಚ್ಚರಿಸಿದ್ದಾರೆ.

ಆರ್‌ಸಿಬಿ ಹಾಗೂ ಐಪಿಎಲ್‌, ಮಂದಾನ ಮತ್ತು ರಜತ್‌ ಅವರ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.