ADVERTISEMENT

ಗೆಳತಿ ಸೋಫಿ ಶೈನ್ ಜತೆ ಎಂಗೇಜ್‌ ಆದ ಕ್ರಿಕೆಟಿಗ ಶಿಖರ್ ಧವನ್: ಚಿತ್ರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 6:58 IST
Last Updated 13 ಜನವರಿ 2026, 6:58 IST
<div class="paragraphs"><p>ಸೋಫಿ ಶೈನ್,&nbsp;ಶಿಖರ್ ಧವನ್</p></div>

ಸೋಫಿ ಶೈನ್, ಶಿಖರ್ ಧವನ್

   

ಕೃಪೆ: ಇನ್ಸ್ಟಾಗ್ರಾಮ್

ಗೆಳತಿ ಸೋಫಿ ಶೈನ್ ಜತೆ ಕ್ರಿಕೆಟಿಗ ಶಿಖ‌ರ್ ಧವನ್‌ ಅವರು ಉಂಗುರ ಬದಲಾಯಿಸಿಕೊಂಡು,  ಎರಡನೇ ವಿವಾಹಕ್ಕೆ ಸಜ್ಜಾಗಿದ್ದಾರೆ.

ADVERTISEMENT

ನಿಶ್ಚಿತಾರ್ಥ ಮಾಡಿಕೊಂಡ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿ ಹಂಚಿಕೊಂಡಿದೆ.

‘ನಗೆಯಿಂದ..ಕನಸುಗಳವರೆಗೆ. ನಮ್ಮ ನಿಶ್ಚಿತಾರ್ಥಕ್ಕೆ ಶುಭಕೋರಿ ಆಶೀರ್ವದಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂಬ ಅಡಿಬರಹವನ್ನು ಬರೆದುಕೊಂಡಿದ್ದಾರೆ.

ವರದಿಗಳ ಪ್ರಕಾರ, ಶಿಖರ್ ಧವನ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸೋಫಿ ಶೈನ್ ಐರಿಶ್ ಮೂಲದವರು. ಈ ಜೋಡಿ ಫೆಬ್ರುವರಿಯಲ್ಲಿ ಹಸೆಮಣೆ ಏರಲಿದೆ. 

ಇವರ ವಿವಾಹ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಯರು ಭಾಗವಹಿಸಲಿದ್ದಾರೆ ಎನ್ನುತ್ತಿವೆ ವರದಿಗಳು.

ಸೋಫಿ ಶೈನ್ ಅವರು , ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾರುಕಟ್ಟೆ ಮತ್ತು ನಿರ್ವಹಣೆಯಲ್ಲಿ ಪದವಿಯನ್ನು ಪಡೆದಿದ್ದಾರೆ. ಸದ್ಯ ಅವರು ಶಿಖರ್ ಧವನ್ ಫೌಂಡೇಶನ್‌ ಅನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.