ADVERTISEMENT

T20 WC: ಭಾರತ ಸೇರಿದಂತೆ ಸೂಪರ್ 8ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 6:11 IST
Last Updated 19 ಫೆಬ್ರುವರಿ 2026, 6:11 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

(ಪಿಟಿಐ ಚಿತ್ರ)

ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಸೂಪರ್ 8'ರ ಹಂತಕ್ಕೆ ವೇದಿಕೆ ಸಿದ್ಧಗೊಂಡಿದೆ.

ADVERTISEMENT

ಸೂಪರ್ 8ರ ಹಂತವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡವು 'ಎ' ಗುಂಪಿನಲ್ಲಿ ಕಾಣಿಸಿಕೊಂಡಿದೆ. ಇದೇ ಗುಂಪಿನಲ್ಲಿ ಕಳೆದ ಬಾರಿಯ ರನ್ನರ್-ಅಪ್ ಆದ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ.

'ಬಿ' ಗುಂಪಿನಲ್ಲಿ ಜಂಟಿ ಆತಿಥ್ಯ ವಹಿಸುತ್ತಿರುವ ಶ್ರೀಲಂಕಾ ಜೊತೆಗೆ ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ತೇರ್ಗಡೆ ಹೊಂದಿವೆ.

ಸೂಪರ್ 8ರ ವೇಳಾಪಟ್ಟಿ ಇಂತಿದೆ:

ಫೆ.21:

ನ್ಯೂಜಿಲೆಂಡ್ vs ಪಾಕಿಸ್ತಾನ, ಕೊಲಂಬೊ, ಸಂಜೆ 7ಕ್ಕೆ

ಫೆ.22:

ಶ್ರೀಲಂಕಾ vs ಇಂಗ್ಲೆಂಡ್, ಪಲ್ಲೆಕೆಲೆ, ಮಧ್ಯಾಹ್ನ 3ಕ್ಕೆ

ಭಾರತ vs ದಕ್ಷಿಣ ಆಫ್ರಿಕಾ, ಅಹಮದಾಬಾದ್, ಸಂಜೆ 7ಕ್ಕೆ

ಫೆ.23:

ಜಿಂಬಾಬ್ವೆ vs ವೆಸ್ಟ್‌ ಇಂಡೀಸ್, ಮುಂಬೈ, ಸಂಜೆ 7ಕ್ಕೆ

ಪೆ.24:

ಇಂಗ್ಲೆಂಡ್ vs ಪಾಕಿಸ್ತಾನ, ಪಲ್ಲಿಕೆಲೆ, ಸಂಜೆ 7ಕ್ಕೆ

ಫೆ.25: ಶ್ರೀಲಂಕಾ vs ನ್ಯೂಜಿಲೆಂಡ್, ಕೊಲಂಬೊ, ಸಂಜೆ 7ಕ್ಕೆ

ಫೆ.26:

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ, ಅಹಮದಾಬಾದ್, ಮಧ್ಯಾಹ್ನ 3ಕ್ಕೆ

ಭಾರತ vs ಜಿಂಬಾಬ್ವೆ, ಚೆನ್ನೈ, ಸಂಜೆ 7ಕ್ಕೆ

ಫೆ.27:

ಇಂಗ್ಲೆಂಡ್ vs ನ್ಯೂಜಿಲೆಂಡ್, ಕೊಲಂಬೊ, ಸಂಜೆ 7ಕ್ಕೆ

ಫೆ.28:

ಶ್ರೀಲಂಕಾ vs ಪಾಕಿಸ್ತಾನ, ಪಲ್ಲಿಕೆಲೆ, ಸಂಜೆ 7ಕ್ಕೆ

ಮಾ.1:

ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ, ದೆಹಲಿ, ಮಧ್ಯಾಹ್ನ 3ಕ್ಕೆ

ಭಾರತ vs ವೆಸ್ಟ್ ಇಂಡೀಸ್, ಕೋಲ್ಕತ್ತ, ಸಂಜೆ 7ಕ್ಕೆ

ಫೆಬ್ರುವರಿ 21ರಿಂದ ಮಾರ್ಚ್ 1ರವರೆಗೆ ಸೂಪರ್ 8 ಹಂತದ ಪಂದ್ಯಗಳು ನಿಗದಿಯಾಗಿವೆ. ಮಾರ್ಚ್ 4 ಹಾಗೂ 5ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಬಹುನಿರೀಕ್ಷಿತ ಫೈನಲ್ ಪಂದ್ಯವು ಮಾರ್ಚ್ 8ರಂದು ನಡೆಯಲಿದೆ.

ಸೂಪರ್ 8 ಗುಂಪುಗಳ ವಿಂಗಡನೆ:

'ಎ' ಗುಂಪು

  • ಭಾರತ,

  • ದಕ್ಷಿಣ ಆಫ್ರಿಕಾ,

  • ವೆಸ್ಟ್ ಇಂಡೀಸ್,

  • ಜಿಂಬಾಬ್ವೆ

'ಬಿ' ಗುಂಪು

  • ಇಂಗ್ಲೆಂಡ್,

  • ನ್ಯೂಜಿಲೆಂಡ್,

  • ಪಾಕಿಸ್ತಾನ,

  • ಶ್ರೀಲಂಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.