ADVERTISEMENT

T20 World Cup | IND vs PAK: ಕೈ ಕುಲುಕುವರೇ ಭಾರತ-ಪಾಕ್ ನಾಯಕರು?

ಟಿ20 ಕ್ರಿಕೆಟ್ ವಿಶ್ವಕಪ್: ಭಾರತ–ಪಾಕಿಸ್ತಾನ ಹಣಾಹಣಿ ಇಂದು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
<div class="paragraphs"><p>ಸೂರ್ಯಕುಮಾರ್ ಯಾದವ್,&nbsp;ಸಲ್ಮಾನ್ ಅಲಿ ಆಘಾ</p></div>

ಸೂರ್ಯಕುಮಾರ್ ಯಾದವ್, ಸಲ್ಮಾನ್ ಅಲಿ ಆಘಾ

   

ಕೊಲಂಬೊ: ಮಹಾಶಿವರಾತ್ರಿಯ ದಿನವಾದ ಭಾನುವಾರ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಉಭಯ ದೇಶಗಳ ನಡುವಣ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣಕ್ಕಾಗಿ ಈ ಪಂದ್ಯವು ಅಪಾರ ಕುತೂಹಲ ಕೆರಳಿಸಿದೆ.

ಹೋದ ವರ್ಷ ಏಷ್ಯಾ ಕಪ್ ಟೂರ್ನಿ ನಡೆದಾಗ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ತಂಡದ ನಾಯಕನ ಹಸ್ತಲಾಘವ ಮಾಡಿರಲಿಲ್ಲ. ಅದರಿಂದಾಗಿ ಇಲ್ಲಿ ಅವರು ಕೈಕುಲುಕುವರೇ ಎಂಬ ಕುತೂಹಲ ಗರಿಗೆದರಿದೆ.

ADVERTISEMENT

ಈ ಕುರಿತು ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸೂರ್ಯಕುಮಾರ್, ‘24 ಗಂಟೆಗಳವರೆಗೆ ಕಾಯಿರಿ. ಆ ಸಂಗತಿಯ ಮೇಲೆ ಅಷ್ಟೇಕೆ ಗಮನ. ಅದರ ಬಗ್ಗೆ ನಾಳೆ ನೋಡುತ್ತೇವೆ. ನಾವಿಲ್ಲಿ ಕ್ರಿಕೆಟ್ ಆಡಲು ಬಂದಿದ್ದೇವೆ. ಆಡುತ್ತೇವೆ’ ಎಂದರು. 

ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಅವರೂ ಇದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದರು, ‘ಈ ಬಗ್ಗೆ ನಾಳೆ (ಭಾನುವಾರ) ನೋಡಿಕೊಳ್ಳೋಣ. ಯಾವುದೇ ಸಂದರ್ಭದಲ್ಲಿಯೂ ಕ್ರೀಡಾಸ್ಫೂರ್ತಿಯನ್ನು ಪಾಲಿಸಲಾಗುವುದು’ ಎಂದರು. 

ಬಲಾಬಲ 

ಪಂದ್ಯಗಳು;16

ಭಾರತ ಜಯ;13

ಪಾಕ್ ಗೆಲುವು;3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.