ADVERTISEMENT

IND v SA ODI | ದೀಪಕ್ ಚಾಹರ್‌ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಅವಕಾಶ: ಬಿಸಿಸಿಐ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2022, 9:43 IST
Last Updated 8 ಅಕ್ಟೋಬರ್ 2022, 9:43 IST
ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಚಾಹರ್
ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಚಾಹರ್   

ನವದೆಹಲಿ: ಭಾರತ ಏಕದಿನ ಕ್ರಿಕೆಟ್ ತಂಡದ ಬೌಲರ್ ದೀಪಕ್ ಚಾಹರ್ ಅವರ ಅನುಪಸ್ಥಿತಿಯಲ್ಲಿ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ದೀಪಕ್ ಚಾಹರ್ ಅವರು ಕಾಲು ಉಳುಕಿ ಗಾಯಗೊಂಡಿದ್ದಾರೆ. ಆದ್ದರಿಂದ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

ಗುರುವಾರ ಲಖನೌನಲ್ಲಿ ನಡೆದಿದ್ದ ಉಭಯ ತಂಡಗಳ ನಡುವಣ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ದೀಪಕ್ ಗಾಯಗೊಂಡಿದ್ದರು. ಅದರಿಂದಾಗಿ ಅವರನ್ನು ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ.

ADVERTISEMENT

‘ದೀಪಕ್ ಕಾಲು ಉಳುಕಿದೆ. ಗಾಯ ಗಂಭೀರವಾಗಿಲ್ಲ. ಆದರೆ ಕೆಲವು ದಿನಗಳ ವಿಶ್ರಾಂತಿಯೊಂದಿಗೆ ಗುಣಮುಖರಾಗುವರು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಆಸ್ಟ್ರೇಲಿಯಾಕ್ಕೆ ಮುಕೇಶ್, ಚೇತನ್
ಮಧ್ಯಮವೇಗಿಗಳಾದ ಮುಕೇಶ್ ಚೌಧರಿ ಹಾಗೂ ಚೇತನ್ ಸಕಾರಿಯಾ ಅವರು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ನೆಟ್ಸ್‌ ಬೌಲರ್‌ಗಳಾಗಿ ಆಯ್ಕೆಯಾಗಿದ್ದಾರೆ.

‘ಪರ್ತ್‌ನಲ್ಲಿ ಭಾರತ ತಂಡವು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅದಕ್ಕೂ ಮುನ್ನ ಮೂರು ದಿವಸ ತಂಡವು ಅಭ್ಯಾಸ ನಡೆಸಲಿದೆ. ಈ ಸಂದರ್ಭದಲ್ಲಿ ನೆಟ್ಸ್‌ ಬೌಲರ್‌ಗಳು ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.