ADVERTISEMENT

15 ಬೌಂಡರಿ, 15 ಸಿಕ್ಸರ್: ಆಂಗ್ಲರ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2026, 9:44 IST
Last Updated 6 ಫೆಬ್ರುವರಿ 2026, 9:44 IST
<div class="paragraphs"><p>ವೈಭವ್ ಸೂರ್ಯವಂಶಿ</p></div>

ವೈಭವ್ ಸೂರ್ಯವಂಶಿ

   

ಚಿತ್ರ: @mufaddal_vohra

ಹರಾರೆ: 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ತಾರೆ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅವರು ಅಂಡರ್19 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತೀ ವೇಗದ ಶತಕ ಸಿಡಿಸಿದ ದಾಖಲೆ ಬರೆದರು.

ADVERTISEMENT

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತ ತಂಡದ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ವೈಭವ್, ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದರು. ಆದರೆ, ಅಂತಿಮವಾಗಿ ಕೇವಲ 55 ಎಸೆತಗಳಲ್ಲಿ ಶತಕ ಸಿಡಿಸಿದರು. ‌

ಆ ಮೂಲಕ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡರು. ಅಂತಿಮವಾಗಿ ಅವರು, 80 ಎಸೆತಗಳಲ್ಲಿ 15 ಬೌಂಡರಿ ಹಾಗೂ 15 ಸಿಕ್ಸರ್ ಸಹಿತ 175 ರನ್ ಸಿಡಿಸಿ ಔಟ್ ಆದರು.

ಅಂಡರ್ 19 ವಿಶ್ವಕಪ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದವರು

ವಿಲ್ ಮಲಜಕ್ (ಆಸ್ಟ್ರೇಲಿಯಾ) ಜಪಾನ್ ವಿರುದ್ಧ ಪರ 51 ಎಸೆತಗಳು

ವೈಭವ್ ಸೂರ್ಯವಂಶಿ (ಭಾರತ) ಇಂಗ್ಲೆಂಡ್ ವಿರುದ್ಧ 55 ಎಸೆತಗಳು

ಖಾಸಿಂ ಅಕ್ರಮ್ (ಪಾಕಿಸ್ತಾನ) ಶ್ರೀಲಂಕಾ ವಿರುದ್ಧ 63 ಎಸೆತಗಳು

ಬೆನ್ ಮೇಯ್ಸ್ (ಇಂಗ್ಲೆಂಡ್) ಸ್ಕಾಟ್‌ಲ್ಯಾಂಡ್ ವಿರುದ್ಧ 65 ಎಸೆತಗಳು

ರಾಜ್ ಬಾವ (ಭಾರತ) ಉಗಾಂಡ ವಿರುದ್ಧ 69 ಎಸೆತಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.