ADVERTISEMENT

Vijay Hazare Trophy: 36 ಎಸೆತಗಳಲ್ಲೇ ಶತಕದ ದಾಖಲೆಯ ‘ವೈಭವ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 5:34 IST
Last Updated 24 ಡಿಸೆಂಬರ್ 2025, 5:34 IST
<div class="paragraphs"><p>ವೈಭವ್ ಸೂರ್ಯವಂಶಿ</p></div>

ವೈಭವ್ ಸೂರ್ಯವಂಶಿ

   

(ಪಿಟಿಐ ಚಿತ್ರ)

ರಾಂಚಿ: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯುವ ಎಡಗೈ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.

ADVERTISEMENT

ಬಿಹಾರ ತಂಡವನ್ನು ಪ್ರತಿನಿಧಿಸುತ್ತಿರುವ 14 ವರ್ಷದ ವೈಭವ್, ರಾಂಚಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ನಡೆಯುತ್ತಿರುವ ಪ್ಲೇಟ್ ಗುಂಪು ಹಂತದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ.

ತಾಜಾ ವರದಿಗಳ ವೇಳೆಗೆ ಬಿಹಾರ 29 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.

ವೈಭವ್ 84 ಎಸೆತಗಳಲ್ಲಿ 190 ರನ್ ಗಳಿಸಿ ಔಟ್ ಆಗಿದ್ದು, ಸ್ವಲ್ಪದರಲ್ಲೇ ದ್ವಿಶತಕ ಗಳಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ವೈಭವ್ ಇನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ 15 ಸಿಕ್ಸರ್‌ಗಳು ಸೇರಿದ್ದವು.

'ಲಿಸ್ಟ್ ಎ' ಕ್ರಿಕೆಟ್‌ನಲ್ಲಿ ವೇಗದ ಶತಕಗಳು:

'ಲಿಸ್ಟ್ ಎ' ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ಭಾರತೀಯ ಬ್ಯಾಟರ್‌ಗಳ ಪೈಕಿ ವೈಭವ್ ಎರಡನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ ಅನ್ಮೋಲ್‌ಪ್ರೀತ್ ಸಿಂಗ್ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇನ್ನು 2010ರಲ್ಲಿ ಯೂಸುಫ್ ಪಠಾಣ್ 40 ಎಸೆತ, 2023ರಲ್ಲಿ ಉರ್ವಿಲ್ ಪಟೇಲ್ 41 ಎಸೆತ ಮತ್ತು 2021ರಲ್ಲಿ ಅಭಿಷೇಕ್ ಶರ್ಮಾ 42 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಒಟ್ಟಾರೆಯಾಗಿ 'ಲಿಸ್ಟ್ ಎ' ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ದಾಖಲೆ ಜೇಕ್ ಫ್ರೇಸರ್ ಮೆಕ್‌ಗುರ್ಕ್ (29) ಹೆಸರಲ್ಲಿದೆ. ಇನ್ನು 'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ಎಬಿ ಡಿವಿಲಿಯರ್ಸ್ 31 ಎಸೆತ ಮತ್ತು ಕೋರಿ ಆ್ಯಂಡರ್ಸನ್ 36 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.