ವಿರಾಟ್ ಕೊಹ್ಲಿ, ಮುಕೇಶ್ ಕುಮಾರ್
ಬೆಂಗಳೂರು: ಇತ್ತೀಚೆಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಭಾರತದ ತಾರೆ ವಿರಾಟ್ ಕೊಹ್ಲಿ ನಿವೃತ್ತಿ ಸಲ್ಲಿಸಿದ್ದರು.
ಇದೀಗ ವಿರಾಟ್ ಕೊಹ್ಲಿ ಅವರ ನಂ.18 ಜೆರ್ಸಿ ಸಂಖ್ಯೆಯ ಪೋಷಾಕಿನಲ್ಲಿ ಮಗದೊಬ್ಬ ಭಾರತೀಯ ಕ್ರಿಕೆಟಿಗ ಆಡುತ್ತಿರುವುದು ಕಂಡುಬಂದಿದೆ.
ಕ್ಯಾಂಟರ್‌ಬರಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ 'ಎ' ತಂಡದ ವೇಗದ ಬೌಲರ್ ಮುಕೇಶ್ ಕುಮಾರ್ 18 ಅಂಕಿಯ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದಾರೆ.
ಪ್ರಸ್ತುತ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಅಲ್ಲದೆ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ಕೊಹ್ಲಿ ಅವರ ಅಚ್ಚುಮೆಚ್ಚಿನ 18 ನಂಬರ್ ಅನ್ನು ಬೇರೆ ಆಟಗಾರ ಬಳಕೆ ಮಾಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ 18 ಸಂಖ್ಯೆಯ ಪೋಷಾಕನ್ನು ಮುಕೇಶ್ ಅವರಿಗೆ ಬಿಸಿಸಿಐ ನೀಡಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಸಾಮಾನ್ಯವಾಗಿ ದಿಗ್ಗಜ ಆಟಗಾರರು ಧರಿಸುವ ಪೋಷಾಕಿಗೆ ವಿಶ್ರಾಂತಿ ಗೌರವ ಘೋಷಿಸುವುದು ವಾಡಿಕೆಯಾಗಿದೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಸಾಧನೆಗಳನ್ನು ಗುರುತಿಸಿ ಗೌರವಾರ್ಥವಾಗಿ ಅನುಕ್ರಮವಾಗಿ 10 ಹಾಗೂ 7ನೇ ಸಂಖ್ಯೆಯ ಪೋಷಾಕನ್ನು ನಿವೃತ್ತಿಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.