ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್‌ಗೆ ಇನ್ನು ಹೆಚ್ಚು ಸಮಯ ಉಳಿದಿಲ್ಲ. ಆದರೆ ಈ ಐಸಿಸಿ ಟೂರ್ನಿಯನ್ನು ಸುಗಮವಾಗಿ ನಡೆಸುವ ಹೊಣೆ ವಹಿಸಬೇಕಾದ ಸ್ಥಳೀಯ ಆಯೋಜನಾ ಸಮಿತಿಯನ್ನು (ಎಲ್‌ಒಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇನ್ನೂ ರೂಪಿಸಿಲ್ಲ.
ಈ ಹಿಂದೆ ಮಾರ್ಚ್‌ನಲ್ಲಿ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯ ಕಾರ್ಯಸೂಚಿಯಲ್ಲಿ ಎಲ್‌ಒಸಿ ರಚನೆಯೂ ಒಳಗೊಂಡಿತ್ತು. ಆದರೆ ಅಂದು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.
ಭಾರತದ ಆತಿಥ್ಯದಲ್ಲಿ ಇದೇ ಸೆಪ್ಟೆಂಬರ್ 30 ರಿಂದ ನವೆಂಬರ್ 2ರವರೆಗೆ ಮಹಿಳಾ ಏಕದಿನ ವಿಶ್ವಕಪ್ ನಡೆಯಬೇಕಾಗಿದೆ. ಈ ವಿಳಂಬವು ಕಳವಳಕ್ಕೆ ಕಾರಣವಾಗಿದೆ.
ಈ ತಿಂಗಳ ಆರಂಭದಲ್ಲಿ ಮಂಡಳಿಯು ವಿಶ್ವಕಪ್‌ನ ಭಾಗಶಃ ವೇಳಾಪಟ್ಟಿ ಪ್ರಕಟಿಸಿತ್ತು. ಐದು ಕಡೆ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿದ್ದು, ಕೊಲಂಬೊ ತಟಸ್ಥ ತಾಣವಾಗಿದೆ. ಪಾಕಿಸ್ತಾನ ಒಳಗೊಳ್ಳುವ ಪಂದ್ಯಗಳನ್ನು ಅಲ್ಲಿ ಆಡಲಾಗುತ್ತದೆ. ಪಂದ್ಯಗಳು ನಡೆಯುವ ಭಾರತದ ನಾಲ್ಕು ತಾಣಗಳೆಂದರೆ– ಬೆಂಗಳೂರು, ಗುವಾಹಟಿ, ವಿಶಾಖಪಟ್ಟಣ ಮತ್ತು ಇಂದೋರ್.
ಬಿಸಿಸಿಐ, ಪಿಸಿಬಿ, ಐಸಿಸಿ ಒಪ್ಪಿಕೊಂಡಿರುವ ಹೈಬ್ರಿಡ್ ಮಾದರಿಯ ಪ್ರಕಾರ 2027ರವರೆಗೆ ಈ ತಟಸ್ದ ತಾಣದ ವ್ಯವಸ್ಥೆ ಇರಲಿದೆ.
ಬಿಸಿಸಿಐ ಹಿರಿಯ ಅಧಿಕಾರಿಗಳು ಐಪಿಎಲ್ ನಡೆಸುವಲ್ಲಿ ನಿರತರಾಗಿದ್ದರು. ಈ ಟೂರ್ನಿ ಜೂನ್ 3ರವರೆಗೆ ನಡೆದಿತ್ತು. ಶೀಘ್ರವೇ ಅಪೆಕ್ಸ್ ಕೌನ್ಸಿಲ್ ಸಭೆ ನಡೆಯಲಿದ್ದು, ಅದಲ್ಲಿ ಸ್ಥಳೀಯ ಆಯೋಜನಾ ಸಮಿತಿಯನ್ನು ರಚಿಸುವ ಸಾಧ್ಯತೆಯಿದೆ.
‘ಸಮಿತಿ ರಚನೆಗೆ ಗಡುವನ್ನು ನಿಗದಿಪಡಿಸಿಲ್ಲ. ಆದರೆ ಸಾಕಷ್ಟು ಮೊದಲೇ ಸಮಿತಿಯನ್ನು ರಚಿಸಿದರೆ ಉತ್ತಮ. ಇಂಗ್ಲೆಂಡ್, ಆಸ್ಟ್ರೇಲಿಯಾದಂಥ ದೇಶದಲ್ಲಿ ಒಂದು ವರ್ಷ ಮೊದಲೇ ಎಲ್‌ಒಸಿ ರೂಪಿಸಲಾಗುತ್ತದೆ. ಭಾಗವಹಿಸುವ ತಂಡಗಳ ಪ್ರಯಾಣ ವ್ಯವಸ್ಥೆ ಮಾಡುವುದು ಸಮಿತಿಯ ಮುಖ್ಯ ಕೆಲಸಗಳಲ್ಲಿ ಒಂದು. ಇದರ ಪಾತ್ರ ಮಹತ್ವದ್ದು’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಈ ಹಿಂದೆ 2013ರಲ್ಲಿ ಕೊನೆಯ ಬಾರಿ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್ ನಡೆದಿತ್ತು. ಭಾರತ ವನಿತೆಯರ ತಂಡ ಇದುವರೆಗೆ ಐಸಿಸಿ ಟ್ರೋಫಿ ಗೆದ್ದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.