ADVERTISEMENT

ಮೆಸ್ಸಿ ಸುತ್ತಲೂ ರಾಜಕಾರಣಿಗಳ ದಂಡು: ಮೈದಾನಕ್ಕೆ ಬಾಟಲಿ,ಕುರ್ಚಿ ಎಸೆದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2025, 7:47 IST
Last Updated 13 ಡಿಸೆಂಬರ್ 2025, 7:47 IST
<div class="paragraphs"><p>ಲಯೊನೆಲ್ ಮೆಸ್ಸಿ</p></div>

ಲಯೊನೆಲ್ ಮೆಸ್ಸಿ

   

ಕೋಲ್ಕತ್ತ: ಭಾರತ ಪ್ರವಾಸದಲ್ಲಿರುವ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಿಂದ ನಿಗದಿತ ಸಮಯಕ್ಕಿಂತ ಮುನ್ನವೇ ನಿರ್ಗಮಿಸಿದ್ದು ಅಭಿಮಾನಿಗಳಗನ್ನು ನಿರಾಸೆಗೆ ತಳ್ಳಿತು.

‌ನೆಚ್ಚಿನ ತಾರೆಯನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳು, ಮೆಸ್ಸಿಯನ್ನು ನೋಡಲಾಗದೆ ಆಕ್ರೋಶಗೊಂಡರು. ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಕೆಲವರು ನೀರಿನ ಬಾಟಲಿ ಹಾಗೂ ಕುರ್ಚಿಗಳನ್ನು ಮೈದಾನದತ್ತ ಎಸೆದರು.

ADVERTISEMENT

‘ನಾಯಕರು ಹಾಗೂ ನಟರು ಮೆಸ್ಸಿಯನ್ನು ಸುತ್ತುವರಿದಿದ್ದರು. ಹೀಗಿದ್ದರೆ ನಾವು ಬರುವ ಅವಶ್ಯಕತೆ ಏನಿತ್ತು? ಒಂದು ಟಿಕೆಟ್‌ಗೆ ₹ 12 ಸಾವಿರ ಕೊಟ್ಟು ನಾವು ಬಂದಿದ್ದೇವೆ. ಆದರೆ ಅವರ ಮುಖವನ್ನೇ ನಮಗೆ ನೋಡಲಾಗಿಲ್ಲ’ ಎಂದು ಅಭಿಮಾನಿಯೊಬ್ಬರು ‘ಎಎನ್‌ಐ’ ಸುದ್ದಿ ಸಂಸ್ಥೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

‘ಇದು ಕೆಟ್ಟದಾಗಿ ಯೋಜಿಸಲಾದ ಕಾರ್ಯಕ್ರಮ. ಮೆಸ್ಸಿ ಕೇವಲ 10 ನಿಮಿಷಕ್ಕಷ್ಟೇ ಬಂದರು. ಎಲ್ಲಾ ನಾಯಕರು ಹಾಗೂ ಸಚಿವರು ಅವರನ್ನು ಸುತ್ತುವರಿದಿದ್ದರು. ನಮಗೇನೂ ಕಾಣಿಸುತ್ತಿರಲಿಲ್ಲ. ಅವರು ಒಂದೇ ಒಂದು ಕಿಕ್ ಅಥವಾ ಪೆನಾಲ್ಟಿಯೂ ಮಾಡಿಲ್ಲ. ಶಾರುಕ್ ಖಾನ್ ಅವರನ್ನೂ ಕರೆತರುವುದಾಗಿ ಹೇಳಿದ್ದರು. ಆದರೆ ಒಬ್ಬರನ್ನೂ ಅವರು ಕರೆತಂದಿಲ್ಲ. ಹತ್ತೇ ನಿಮಿಷದಲ್ಲಿ ಹೋದರು. ನಮ್ಮ ಹಣ, ಅಭಿಮಾನ, ಸಮಯ, ಭಾವನೆಗಳು ವ್ಯರ್ಥವಾದವು. ನಮಗೆ ಏನೂ ಕಾಣಿಸಲೇ ಇಲ್ಲ’ ಎಂದು ಇನ್ನೊಬ್ಬರು ಆಕ್ರೋಶಿತರಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.