ADVERTISEMENT

2025 ಕ್ರೀಡಾ ಮುನ್ನೋಟ | ಮಹಿಳಾ ಏಕದಿನ ಕ್ರಿಕೆಟ್‌, ಕೊಕ್ಕೊ, ಚೆಸ್‌ ವಿಶ್ವಕಪ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 0:17 IST
Last Updated 1 ಜನವರಿ 2025, 0:17 IST
ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು –ಪಿಟಿಐ ಚಿತ್ರ
ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು –ಪಿಟಿಐ ಚಿತ್ರ   

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್‌ ವಿಶ್ವಕಪ್‌, ಲಾಡ್ಸ್‌ನಲ್ಲಿ ಆಯೋಜನೆಗೊಳ್ಳಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌, ಪಾಕಿಸ್ತಾನ ಆತಿಥ್ಯದ ಐಸಿಸಿ ಚಾಂಪಿಯನ್ಸ್ ಟ್ರೋಫಿ, ನವದೆಹಲಿಯಲ್ಲಿ ನಡೆಯುವ ಚೊಚ್ಚಲ ಕೊಕ್ಕೊ ವಿಶ್ವಕಪ್‌, ಫಿಡೆ ಮಹಿಳೆಯರ ಚೆಸ್‌ ವಿಶ್ವಕಪ್‌ ಟೂರ್ನಿ ಈ ವರ್ಷ ನಡೆಯಲಿರುವ ಪ್ರಮುಖ ಕ್ರೀಡಾಕೂಟಗಳಲ್ಲಿ ಸೇರಿವೆ.

2025ರಲ್ಲಿ ನಡೆಯಲಿರುವ ಪ್ರಮುಖ ಕೂಟಗಳ ಪಟ್ಟಿ ಇಲ್ಲಿವೆ...
  1. ಮಹಿಳೆಯರ ಹಾಕಿ: ಜ.12ರಿಂದ 26ರವರೆಗೆ ರಾಂಚಿಯಲ್ಲಿ ಹಾಕಿ ಇಂಡಿಯಾ ಲೀಗ್‌ ಟೂರ್ನಿ ಆಯೋಜನೆಗೊಂಡಿದೆ.

  2. ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಜ.12ರಿಂದ 16ರವರೆಗೆ ನಡೆಯಲಿದೆ.

    ADVERTISEMENT
  3. ಕೊಕ್ಕೊ ವಿಶ್ವಕಪ್‌: ನವದೆಹಲಿಯಲ್ಲಿ ಜ.13ರಿಂದ 19ರವರೆಗೆ ಚೊಚ್ಚಲ ಟೂರ್ನಿ ನಡೆಯಲಿದೆ.

  4. ಇಂಡಿಯಾ ಓಪನ್ ಬ್ಯಾಡ್ಮಿಂಟನ್‌: ಜ.14ರಿಂದ 19ರವರೆಗೆ ಟೂರ್ನಿಯು ನವದೆಹಲಿಯಲ್ಲಿ ನಡೆಯಲಿದೆ.

  5. ಏಷ್ಯನ್‌ ಚಳಿಗಾಲದ ಕ್ರೀಡೆ: ಫೆ.7ರಿಂದ 14ರವರೆಗೆ ಚೀನಾದ ಹೈಲಾಂಗ್ಜಿಯಾಂಗ್‌ನ ಹರ್ಬಿನ್‌ನಲ್ಲಿ ಕೂಟ ಆಯೋಜನೆಗೊಂಡಿದೆ.

  6. ಮಹಿಳೆಯರ ಹಾಕಿ: ಫೆ.15ರಿಂದ 19ರವರೆಗೆ ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ ನಡೆಯಲಿದೆ.

  7. ಪುರುಷರ ಹಾಕಿ: ಫೆ.15ರಿಂದ 22ರವರೆಗೆ ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ ಆಯೋಜನೆಗೊಂಡಿದೆ.

  8. ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌: ಪಾಕಿಸ್ತಾನದ ಆತಿಥ್ಯದಲ್ಲಿ ಫೆ.19ರಿಂದ ಮಾರ್ಚ್‌ 9ರವರೆಗೆ ಟೂರ್ನಿ ನಡೆಯಲಿದೆ. ಭಾರತದ ಪಂದ್ಯಗಳು ದುಬೈನಲ್ಲಿ ಆಯೋಜನೆಗೊಂಡಿವೆ.

  9. ಆಲ್‌ ಇಂಗ್ಲೆಂಡ್‌ ಓಪನ್‌: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಾರ್ಚ್‌ 11ರಿಂದ 16ರವರೆಗೆ ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ.

  10. ಐಪಿಎಲ್‌ ಕ್ರಿಕೆಟ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ 18ನೇ ಆವೃತ್ತಿ ಮಾರ್ಚ್‌ 14ರಿಂದ ಆರಂಭಗೊಂಡು ಮೇ 25ರವರೆಗೆ ನಡೆಯಲಿದೆ.

  11. ಪುರುಷರ ಹಾಕಿ: ಏ.4ರಿಂದ 15ರವರೆಗೆ 15ನೇ ಹಾಕಿ ಇಂಡಿಯಾ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡಯಲಿದೆ.

  12. ಸ್ನೂಕರ್‌ ಚಾಂಪಿಯನ್‌ಷಿಪ್‌: ಇಂಗ್ಲೆಂಡ್‌ನಲ್ಲಿ ಏ.19ರಿಂದ ಮೇ 5ರವರೆಗೆ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

  13. ವಿಶ್ವ ಅಥ್ಲೆಟಿಕ್ಸ್‌ ರಿಲೆ: ಪುರುಷರ, ಮಹಿಳೆಯರ ಮತ್ತು ಮಿಶ್ರ ವಿಶ್ವ ಅಥ್ಲೆಟಿಕ್ಸ್‌ ರಿಲೆ ಮೇ 10 ಮತ್ತು 11ರಂದು ಚೀನಾದಲ್ಲಿ ಆಯೋಜನೆಗೊಂಡಿದೆ.

  14. ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಕತಾರ್‌ನ ದೋಹಾದಲ್ಲಿ ಮೇ 17ರಿಂದ 25ರವರೆಗೆ ನಡೆಯಲಿದೆ.

  15. ಫ್ರೆಂಚ್‌ ಓಪನ್‌ ಟೆನಿಸ್‌: ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮೇ 25ರಿಂದ ಜೂನ್‌ 7ರವರೆಗೆ ನಡೆಯಲಿದೆ.

  16. ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ದಕ್ಷಿಣ ಕೊರಿಯಾದಲ್ಲಿ ಮೇ 27ರಿಂದ 31ರವರೆಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.‌

  17. ಫಿಫಾ ಕ್ಲಬ್‌ ವಿಶ್ವಕಪ್‌ ಫುಟ್‌ಬಾಲ್‌: ಅಮೆರಿಕದ ಆತಿಥ್ಯದಲ್ಲಿ ಜೂನ್‌ 14ರಿಂದ ಜುಲೈ 13ರವರೆಗೆ ಟೂರ್ನಿ ನಡೆಯಲಿದೆ.

  18. ವಿಂಬಲ್ಡನ್‌ ಟೆನಿಸ್‌: ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನಲ್ಲಿ ಜೂನ್‌ 30ರಿಂದ ಜುಲೈ 13ರವರೆಗೆ ಟೂರ್ನಿ ಆಯೋಜನೆಯಾಗಿದೆ.

  19. ಫಿಡೆ ಮಹಿಳೆಯರ ಚೆಸ್‌ ವಿಶ್ವಕಪ್‌: ಜಾರ್ಜಿಯಾದಲ್ಲಿ ಜುಲೈ 5ರಿಂದ 29ರವರೆಗೆ ಟೂರ್ನಿ ನಡೆಯಲಿದೆ

  20. ವಿಶ್ವ ಈಜು ಚಾಂಪಿಯನ್‌ಷಿಪ‍್‌: ಸಿಂಗಪುರದ ಆತಿಥ್ಯದಲ್ಲಿ ವಿಶ್ವ ಈಜು ಕೂಡ ಜುಲೈ 11ರಿಂದ ಆ.3ರವರೆಗೆ ನಡೆಯಲಿದೆ.

  21. ಮಹಿಳಾ ಕ್ರಿಕೆಟ್‌ ವಿಶ್ವಕಪ್‌: ಭಾರತದ ಆತಿಥ್ಯದಲ್ಲಿ ಆ.15ರಿಂದ ಸೆಪ್ಟೆಂಬರ್‌ 15ರವರೆಗೆ ಏಕದಿನ ಟೂರ್ನಿ ಆಯೋಜನೆಗೊಂಡಿದೆ.

  22. ಅಮೆರಿಕ ಓಪನ್‌ ಟೆನಿಸ್‌: ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಆ.25ರಿಂದ ಸೆ.7ರವರೆಗೆ ಟೂರ್ನಿ ನಡೆಯಲಿದೆ

  23. ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ಯಾರಿಸ್‌ನಲ್ಲಿ ಆ.25ರಿಂದ 31ರವರೆಗೆ ಆಯೋಜನೆಯಾಗಿದೆ.

  24. ಡೈಮಂಡ್‌ ಲೀಗ್‌ ಫೈನಲ್‌: ಜ್ಯೂರಿಚ್‌ನಲ್ಲಿ ಆ.27 ಮತ್ತು 28ರಂದು ಫೈನಲ್‌ ಸ್ಪರ್ಧೆ ನಡೆಯಲಿದೆ.

  25. ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌: ಸೆ.5ರಿಂದ 15ರವರೆಗೆ ದಕ್ಷಿಣ ಕೊರಿಯಾದಲ್ಲಿ ಟೂರ್ನಿ ಆಯೋಜನೆಯಾಗಿದೆ.

  26. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಟೋಕಿಯೊದಲ್ಲಿ ಸೆ.13ರಿಂದ 21ರವರೆಗೆ ಕೂಟ ನಡೆಯಲಿದೆ.

  27. ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಕ್ರೊವೇಷ್ಯಾದಲ್ಲಿ ಸೆ.13ರಿಂದ 21ರವರೆಗೆ ಕೂಟ ನಡೆಯಲಿದೆ.

  28. ಫಿಫಾ ಯೂತ್‌ ವಿಶ್ವಕಪ್‌: ಸೆ.27ರಿಂದ ಅ.19ರವರೆಗೆ ಐದು ರಾಷ್ಟ್ರಗಳ ಆತಿಥ್ಯದಲ್ಲಿ 20 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ನಡೆಯಲಿದೆ.

  29. ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌: ನಾರ್ವೆಯ ಆತಿಥ್ಯದಲ್ಲಿ ಅ.1ರಿಂದ 10ರವರೆಗೆ ಟೂರ್ನಿ ಆಯೋಜನೆಗೊಂಡಿದೆ.

  30. ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಅ.13ರಿಂದ 19ರವರೆಗೆ ಭಾರತದ ಆತಿಥ್ಯದಲ್ಲಿ ಗುವಾಹಟಿಯಲ್ಲಿ ಟೂರ್ನಿ ನಡೆಯಲಿದೆ.

  31. ವಿಶ್ವ ಬಾಕ್ಸಿಂಗ್‌ ಕಪ್‌ ಫೈನಲ್‌: ಭಾರತದ ಆತಿಥ್ಯದಲ್ಲಿ ನಡೆಯುವ ಟೂರ್ನಿ ನವೆಂಬರ್‌ನಲ್ಲಿ ನಡೆಯಲಿದೆ. (ವೇಳಾಪಟ್ಟಿ ನಿಗದಿಯಾಗಿಲ್ಲ)

  32. ವಿಶ್ವ ಶೂಟಿಂಗ್‌: ಕೈರೊದಲ್ಲಿ ನ.6ರಿಂದ 16ರವರೆಗೆ ವಿಶ್ವ ರೈಫಲ್‌ ಮತ್ತು ಪಿಸ್ತೂಲ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

  33. ಪುರುಷರ ಹಾಕಿ ಜೂನಿಯರ್‌ ವಿಶ್ವಕಪ್‌: ಭಾರತದ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ. (ವೇಳಾಪಟ್ಟಿ ಅಂತಿಮಗೊಂಡಿಲ್ಲ)

  34. ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಬ್ಯಾಡ್ಮಿಂಟನ್‌: ಚೀನಾದಲ್ಲಿ ಡಿ.10ರಿಂದ 14ರವರೆಗೆ ಟೂರ್ನಿ ಆಯೋಜನೆಗೊಂಡಿದೆ.

ರೋಹಿತ್ ಶರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.