ADVERTISEMENT

ಹಾಕಿ ರ‍್ಯಾಂಕಿಂಗ್‌ನಲ್ಲಿ ಭಾರತ ಪುರುಷ-ಮಹಿಳಾ ತಂಡಗಳ ಶ್ರೇಷ್ಠ ಸಾಧನೆ

ಪಿಟಿಐ
Published 7 ಆಗಸ್ಟ್ 2021, 10:09 IST
Last Updated 7 ಆಗಸ್ಟ್ 2021, 10:09 IST
ಹಾಕಿ ರ‍್ಯಾಂಕಿಂಗ್‌ನಲ್ಲಿ ಬಡ್ತಿ
ಹಾಕಿ ರ‍್ಯಾಂಕಿಂಗ್‌ನಲ್ಲಿ ಬಡ್ತಿ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು, ವಿಶ್ವ ರ‍್ಯಾಂಕಿಂಗ್‌ನಲ್ಲೂ ಕ್ರಮವಾಗಿ ಮೂರನೇ ಹಾಗೂ ಎಂಟನೇ ಸ್ಥಾನಗಳಿಗೆಜಿಗಿದಿದೆ.

ಇದು ಹಾಕಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಇದನ್ನೂ ಓದಿ:

ಜರ್ಮನಿ ವಿರುದ್ಧ 5-4 ಗೋಲುಗಳಿಂದ ಗೆಲುವು ದಾಖಲಿಸಿದ ಭಾರತದ ಪುರುಷ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ಪದಕ ಜಯಿಸಿತ್ತು.

ADVERTISEMENT

'ತಂಡದ ಪ್ರತಿಯೊಬ್ಬ ಆಟಗಾರನ ಕಠಿಣ ಪರಿಶ್ರಮಕ್ಕೆ ದೊರಕಿದ ಪ್ರತಿಫಲ ಇದಾಗಿದ್ದು, ಇಲ್ಲಿಂದ ಭಾರತೀಯ ಹಾಕಿಯು ಮತ್ತಷ್ಟು ಉತ್ತುಂಗಕ್ಕೇರಲಿದೆ' ಎಂದು ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್ ತಿಳಿಸಿದ್ದಾರೆ.

ಅತ್ತ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬ್ರಿಟನ್ ವಿರುದ್ಧ ಸೋಲು ಅನುಭವಿಸಿದ ಮಹಿಳಾ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ:

'ಪದಕ ಗೆಲ್ಲಲು ಸಾಧ್ಯವಾಗದಿರುವುದು ನೋವನ್ನುಂಟು ಮಾಡಿದೆ. ಆದರೆ ಧನಾತ್ಮಕ ಅಂಶಗಳತ್ತ ಮೆಲುಕು ಹಾಕಿದಾಗ, ಕಳೆದ ಕೆಲವು ವರ್ಷಗಳಲ್ಲಿ ಹಾಕಿ ತಂಡವು ಸಾಧಿಸಿರುವ ಪ್ರಗತಿಯು ನಿಜಕ್ಕೂ ಹೆಮ್ಮೆಪಡುವಂತದ್ದು' ಎಂದು ನಾಯಕಿ ರಾಣಿ ರಾಂಪಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.