ADVERTISEMENT

AI Impact Summit | ರಿಲಯನ್ಸ್‌ ಜಿಯೊದಿಂದ ₹10 ಲಕ್ಷ ಕೋಟಿ ಹೂಡಿಕೆ: ಮುಕೇಶ್

ಪಿಟಿಐ
Published 19 ಫೆಬ್ರುವರಿ 2026, 7:20 IST
Last Updated 19 ಫೆಬ್ರುವರಿ 2026, 7:20 IST
<div class="paragraphs"><p>ಮುಕೇಶ್ ಅಂಬಾನಿ</p></div>

ಮುಕೇಶ್ ಅಂಬಾನಿ

   

(ಪಿಟಿಐ ಚಿತ್ರ)

ನವದೆಹಲಿ: ಮೊಬೈಲ್ ದತ್ತಾಂಶದಲ್ಲಿ ಮಾಡಿದಂತೆ ಕೃತಕ ಬುದ್ಧಿಮತ್ತೆಯಲ್ಲಿ (ಎ.ಐ) ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡುವುದಾಗಿ ಭರವಸೆ ನೀಡಿರುವ ಉದ್ಯಮಿ ಮುಕೇಶ್ ಅಂಬಾನಿ, ರಿಲಯನ್ಸ್‌ ಜಿಯೊ ₹10 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ADVERTISEMENT

ನವದಹೆಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 'ಎ.ಐ ಇಂಪ್ಯಾಕ್ಟ್ ಶೃಂಗ'ದಲ್ಲಿ ಭಾಷಣ ಮಾಡಿದ ಅಂಬಾನಿ, 'ಎ.ಐಯ ಅತ್ಯುತ್ತಮ ಹಂತ ಇನ್ನಷ್ಟೇ ಬರಬೇಕಿದೆ. ಸೂಪರ್ ಸಮೃದ್ಧಿಯ ಜಗತ್ತನ್ನು ತೆರೆದುಕೊಳ್ಳಲಿದೆ' ಎಂದು ಹೇಳಿದ್ದಾರೆ.

'ಎ.ಐನೊಂದಿಗೆ ಜಗತ್ತು ತೆರೆದುಕೊಳ್ಳುತ್ತಿದೆ. ಒಂದು ಕಂಡೆ ದುಬಾರಿ ಹಾಗೂ ನಿಯಂತ್ರಿತ ದತ್ತಾಂಶದ ಎ.ಐ ಮತ್ತು ಇನ್ನೊಂದೆಡೆ ಕೈಗೆಟುಕುವ ಎ.ಐ ಅನ್ನು ಖಾತ್ರಿಪಡಿಸುತ್ತದೆ' ಎಂದಿದ್ದಾರೆ.

'ಮುಂದಿನ ಏಳು ವರ್ಷಗಳಲ್ಲಿ ರಿಲಯನ್ಸ್‌ ಜಿಯೊ ₹10 ಲಕ್ಷ ಕೋಟಿ ಹೂಡಿಕೆ ಮಾಡಲಿದೆ. ಇದು ಬರೀ ಊಹಾತ್ಮಕ ಹೂಡಿಕೆಯಲ್ಲ. ಇದು ತಾಳ್ಮೆಯ, ಶಿಸ್ತುಬದ್ಧ ಮತ್ತು ರಾಷ್ಟ್ರ ನಿರ್ಮಾಣದ ಬಂಡವಾಳ ಆಗಿದೆ' ಎಂದು ತಿಳಿಸಿದ್ದಾರೆ.

'ಎ.ಐಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಜಿಯೊ ಇಂಟೆಲಿಜೆನ್ಸ್ ಭಾರತದ ಸಾರ್ವಭೌಮ ಕಂಪ್ಯೂಟ್ ಮೂಲಸೌಕರ್ಯವನ್ನು ನಿರ್ಮಿಸಲಿದೆ' ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.