ADVERTISEMENT

Samsung Galaxy: ಮಾರುಕಟ್ಟೆಗೆ ಲಗ್ಗೆ ಇಡಲಿರುವ ಎಸ್26 ಸರಣಿಯ ಸ್ಮಾರ್ಟ್‌ಫೋನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 7:20 IST
Last Updated 20 ಫೆಬ್ರುವರಿ 2026, 7:20 IST
<div class="paragraphs"><p>ಸ್ಯಾಮ್‌ಸಂಗ್</p></div>

ಸ್ಯಾಮ್‌ಸಂಗ್

   

ಬೆಂಗಳೂರು: ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಫೆಬ್ರುವರಿ 25ರಂದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆಯಲಿರುವ ಅದ್ಧೂರಿ 'ಅನ್‌ಪ್ಯಾಕ್ಡ್' ಸಮಾರಂಭದಲ್ಲಿ ನೂತನ ಗ್ಯಾಲಕ್ಸಿ ಎಸ್26 ಶ್ರೇಣಿಯ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ಯಾವುವು?

ADVERTISEMENT

ಸ್ಯಾಮ್‌ಸಂಗ್ ಸಂಸ್ಥೆಯು ಹೊಸ ಗ್ಯಾಲಕ್ಸಿ ಶ್ರೇಣಿಯಲ್ಲಿ ಗ್ಯಾಲಕ್ಸಿ ಎಸ್ 26, ಗ್ಯಾಲಕ್ಸಿ ಎಸ್‌26 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್‌26 ಅಲ್ಟ್ರಾ ಎಂಬ ಮೂರು ಮಾದರಿಗಳನ್ನು ಪರಿಚಯಿಸುವ ನಿರೀಕ್ಷೆ ಇದೆ.

ಏನಿದರ ವೈಶಿಷ್ಟ್ಯ?

ಸ್ಯಾಮ್‌ಸಂಗ್ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ತನ್ನ ಕ್ಯಾಮೆರಾಗಾಗಿ ಹೆಚ್ಚಿನ ಪ್ರಸಿದ್ಧಿ ಪಡೆದಿವೆ. ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖವಾಗಿ ಕ್ಯಾಮೆರಾ ಸಾಮರ್ಥ್ಯದಲ್ಲಿ ಬದಲಾವಣೆ ಕಂಡುಬರುವ ನಿರೀಕ್ಷೆ ಇದೆ. ಸುಧಾರಿತ ಕ್ಯಾಮೆರಾ ಜೊತೆಗೆ ಮಂದ ಬೆಳಕಿನಲ್ಲೂ ಅತ್ಯುತ್ತಮ ಗುಣಮಟ್ಟದ ವಿಡಿಯೊ ಸೆರೆ ಹಿಡಿಯಲು ಹಾಗೂ ವರ್ಧಿತ ಝೂಮ್ ಆಯ್ಕೆಯು ಇರಲಿದೆ.

ದುಬಾರಿ ಸ್ಮಾರ್ಟ್‌ಫೋನ್‌:

ಈ ಪೈಕಿ ಅಲ್ಟ್ರಾ ಶ್ರೇಣಿಯು ಸಂಸ್ಥೆಯು ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೆನಿಸಲಿದೆ. ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಒಳಗೊಂಡಿರಲಿದೆ. ಅದೇ ಹೊತ್ತಿಗೆ ಗ್ಯಾಲಕ್ಸಿ ಎಸ್26 ಹಾಗೂ ಗ್ಯಾಲಕ್ಸಿ ಎಸ್‌26 ಪ್ಲಸ್ ಕೆಲವು ಮಾರುಕಟ್ಟೆಗಳಲ್ಲಿ ಎಕ್ಸಿನೋಸ್ 2600 ಪ್ರೊಸೆಸರ್‌ನ ಕಾರ್ಯಾಚರಣೆಯು ಇರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಆಧುನಿಕತೆಗೆ ತಕ್ಕಂತೆ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ವರ್ಧಿತ ಬ್ಯಾಟರಿ ಸಾಮರ್ಥ್ಯವು ಮಗದೊಂದು ಆಕರ್ಷಣೆಯಾಗಿರಲಿದೆ.

ಆಫರ್:

ಸ್ಯಾಮ್ಸ್‌ಸಂಗ್‌ ಕಂಪನಿಯು ತನ್ನ ಹೊಸ ಗ್ಯಾಲಕ್ಸಿ ಎಸ್ ಸರಣಿಯ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗೆ ಪ್ರೀ ಆರ್ಡರ್‌ಗಳನ್ನು ಆರಂಭಿಸಿದೆ.

ಸ್ಯಾಮ್‌ಸಂಗ್ ಅಧಿಕೃತ ವೆಬ್‌ಸೈಟ್‌ನಲ್ಲಿ ₹999 ಪಾವತಿಸಿ ನಿಮ್ಮ ನೆಚ್ಚಿನ ಗ್ಯಾಲಕ್ಸಿ ಸರಣಿಗಳ ಸ್ಮಾರ್ಟ್‌ಫೋನ್ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಇದರೊಂದಿಗೆ ಗ್ರಾಹಕರಿಗೆ ₹2,699 ಮೌಲ್ಯದ ವೋಚರ್ ತಮ್ಮದಾಗಿಸುವ ಅವಕಾಶವಿದೆ. ದೈನಂದಿನ ₹5000 ಮೌಲ್ಯದ ವೋಚರ್ ಸಹ ಗೆಲ್ಲಬಹುದಾಗಿದೆ. ಸಂಸ್ಥೆಯು ₹50 ಸಾವಿರದ ಗ್ರ್ಯಾಂಡ್ ಗೀವ್ ಅವೇ ಸಹ ಘೋಷಿಸಿದೆ.

ಇದೇ ಕಾರ್ಯಕ್ರಮದಲ್ಲಿ ಗ್ಯಾಲಕ್ಸಿ ಬಡ್ಸ್ 4 ಶ್ರೇಣಿಯನ್ನು ಸ್ಯಾಮ್‌ಸಂಗ್ ಪರಿಚಯಿಸುವ ನಿರೀಕ್ಷೆ ಇದೆ.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.