ADVERTISEMENT

ಸಿಗರೇಟು ಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ: ಹರಿದಾಡಿದ ತರಹೇವಾರಿ ಮೀಮ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 9:04 IST
Last Updated 1 ಫೆಬ್ರುವರಿ 2026, 9:04 IST
<div class="paragraphs"><p>ಹರಿದಾಡಿದ ತರಹೇವಾರಿ ಮೀಮ್‌ಗಳು</p></div>

ಹರಿದಾಡಿದ ತರಹೇವಾರಿ ಮೀಮ್‌ಗಳು

   

ಚಿತ್ರ: ಎಕ್ಸ್‌

ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್‌ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್‌ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರುತ್ತಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.

ADVERTISEMENT

ಈ ನಿಯಮ ಜಾರಿಗೆ ಬರುತ್ತಿದ್ದಂತೆ ಸಿಗರೇಟು ಹಾಗೂ ಪಾನ್‌ ಮಸಾಲಾ ಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ ತಾಗಿದೆ. ಅದರಲ್ಲೂ ಸಿಗರೇಟು ಪ್ರಿಯರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಇದರ ಕುರಿತಾದ ಮೀಮ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

ಅಂಗಡಿ ಮುಂದೆ ಗ್ರಾಹಕರು ಈಗ ‘₹10 ಸಿಗರೇಟಿನ ಬೆಲೆ ಎಷ್ಟು’ ಎಂದು ಕೇಳುತ್ತಾರೆ ಎನ್ನುವ ಮೀಮ್‌ ಹಾಗೂ ‘ಬದುಕಿನಲ್ಲಿನ ಒತ್ತಡಕ್ಕಾಗಿ ಜನರು ಧೂಮಪಾನ ಮಾಡುತ್ತಾರೆ, ಆದರೆ ಈಗ ಸಿಗರೇಟಿನ ಬೆಲೆ ಜಾಸ್ತಿಯಾಗಿದೆ ಎಂದೇ ಒತ್ತಡವುಂಟಾಗುತ್ತಿದೆ’ ಎನ್ನುವ ಪೋಸ್ಟ್‌ಗಳು ಸಿಕ್ಕಾಪಟ್ಟೆ ಹರಿದಾಡುತ್ತಿವೆ.

2017ರ ಜುಲೈ 1ಕ್ಕೆ ಜಾರಿಗೆ ಬಂದ ಜಿಎಸ್‌ಟಿಯಲ್ಲಿ ಸಿಗರೇಟು ಮತ್ತು ಪಾನ್ ಮಸಾಲಾ ಮೇಲೆ ಹಾಲಿ ಇರುವ ಶೇ 28ರ ಜಿಎಸ್‌ಟಿ ಬದಲಾಗಲಿದೆ. ಆರೋಗ್ಯದ ಮೇಲೆ ಹಾನಿ ಮಾಡಬಹುದಾದ ಈ ಉತ್ಪನ್ನಗಳ ಮೇಲೆ ಪರಿಹಾರ ಸೆಸ್‌ ಕೂಡಾ ಈಗ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.