ADVERTISEMENT

ಟೀಂ ಇಂಡಿಯಾ ಫೋಟೊದಲ್ಲಿ ಅನುಷ್ಕಾ, ಅಸಮಧಾನ ವ್ಯಕ್ತಪಡಿಸಿದ ಟ್ವೀಟಿಗರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 11:11 IST
Last Updated 8 ಆಗಸ್ಟ್ 2018, 11:11 IST
   

ಲಂಡನ್: ಭಾರತೀಯ ಕ್ರಿಕೆಟ್ ತಂಡದ ಗ್ರೂಪ್ ಫೋಟೊದಲ್ಲಿ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಕ್ಕೆಟ್ವೀಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದಸ್ಯರಿಗೆ ಇಂಡಿಯನ್ ಹೈಕಮಿಷನ್ ನೀಡಿದ ಸತ್ಕಾರ ಕೂಟದ ನಂತರ ತೆಗೆದ ಫೋಟೊ ಇದಾಗಿದೆ.ಮುಂದಿನ ಸಾಲಿನಲ್ಲಿ ನಾಯಕ ವಿರಾಟ್ ಕೊಹ್ಲಿ ಜತೆ ಅನುಷ್ಕಾ ನಿಂತಿರುವ ಈ ಫೋಟೊವನ್ನು ಬಿಸಿಸಿಐ ಟ್ವೀಟ್ ಮಾಡಿತ್ತು.

ಈ ಫೋಟೊ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿರುವ ಟ್ವೀಟಿಗರೊಬ್ಬರು 'ಭಾರತೀಯ ಕ್ರಿಕೆಟ್ ತಂಡದ ಉಪ ನಾಯಕ ಕೊನೆಯ ಸಾಲಿನಲ್ಲಿ ಮತ್ತು ಟೀಂ ಇಂಡಿಯಾದ ಫಸ್ಟ್ ಲೇಡಿ ಮೊದಲ ಸಾಲಿನಲ್ಲಿ. ಕೆಲವು ದಿನಗಳ ಹಿಂದೆ ಇವರು ಜನರಿಗೆ ಪಾಠ ಮಾಡಿದ್ದರು' ಎಂದಿದ್ದಾರೆ.

ADVERTISEMENT

ಇನ್ನೊಬ್ಬ ಟ್ವೀಟಿಗ, ಅನುಷ್ಕಾ ಶರ್ಮಾ ಟೀಂನಲ್ಲಿದ್ದು, ಮುಂದಿನ ಪಂದ್ಯ ಆಡಲಿದ್ದಾರೆ ಎಂದು ಲೇವಡಿಮಾಡಿದ್ದಾರೆ. ಅನುಷ್ಕಾ ಶರ್ಮಾ ಇಂಡಿಯನ್ ಕ್ರಿಕೆಟ್ ಟೀಂ ಯಾವಾಗ ಸೇರಿದ್ದು ಎಂದು ಕೆಲವರು ಪ್ರಶ್ನಿಸಿದ್ದರೆ ಇನ್ನು ಕೆಲವರು ದೋನಿ ನಾಯಕನಾಗಿದ್ದಾಗ ಆತನ ಪತ್ನಿ ಸಾಕ್ಷಿ ದೋನಿ ಈ ರೀತಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಟ್ವೀಟರಾತಿಗಳ ಪ್ರತಿಕ್ರಿಯೆ ಹೀಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.