ADVERTISEMENT

WhatsApp vs Signal: ವಾಟ್ಸ್ ಆ್ಯಪ್, ಟೆಲಿಗ್ರಾಂ, ಸಿಗ್ನಲ್... ಯಾವುದು ಬೆಸ್ಟ್?

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 4:44 IST
Last Updated 12 ಜನವರಿ 2021, 4:44 IST
ವಾಟ್ಸ್ ಆ್ಯಪ್, ಟೆಲಿಗ್ರಾಂ ಮತ್ತು ಸಿಗ್ನಲ್ ನಡುವಿನ ವ್ಯತ್ಯಾಸವೇನು?
ವಾಟ್ಸ್ ಆ್ಯಪ್, ಟೆಲಿಗ್ರಾಂ ಮತ್ತು ಸಿಗ್ನಲ್ ನಡುವಿನ ವ್ಯತ್ಯಾಸವೇನು?   

ಬೆಂಗಳೂರು:ಇಂದು ಜನರು ಅತಿಹೆಚ್ಚಿನ ಸಮಯ ಕಳೆಯುವುದು ಸಾಮಾಜಿಕ ಜಾಲತಾಣಗಳಲ್ಲಿ.. ಅದರಲ್ಲೂ ವಾಟ್ಸ್ ಆ್ಯಪ್ ಹೆಚ್ಚು ಜನಪ್ರಿಯ ಮತ್ತು ಅಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್ ಒಡೆತನದ ವಾಟ್ಸ್ ಆ್ಯಪ್ ಹೊಸ ಅಪ್‌ಡೇಟ್‌ನಲ್ಲಿ ಫೇಸ್‌ಬುಕ್ ಜತೆಗೆ ಬಳಕೆದಾರರ ದತ್ತಾಂಶವನ್ನು ಹಂಚಿಕೊಳ್ಳುತ್ತದೆ ಎನ್ನಲಾಗಿತ್ತು. ಅದರ ಮಧ್ಯೆಯೇ ಜನರು ವಾಟ್ಸ್ ಆ್ಯಪ್ ಹೊಸ ನೀತಿ ಕುರಿತು ಅಸಮಾಧಾನ ವ್ಯಕ್ತಪಡಿಸಿ, ವಾಟ್ಸ್ ಆ್ಯಪ್‌ಗೆ ಪರ್ಯಾಯವಾಗಿ ಟೆಲಿಗ್ರಾಂ ಮತ್ತು ಸಿಗ್ನಲ್ ಅ್ಯಪ್ ಬಳಸಲು ಮುಂದಾದರು.

ವಾಟ್ಸ್ ಆ್ಯಪ್ ಹೊಸ ನೀತಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ಹೇಳಿಕೆ ಬಿಡುಗಡೆ ಮಾಡಿದ ಫೇಸ್‌ಬುಕ್, ವಾಟ್ಸಪ್ ವೈಯಕ್ತಿಕ ಚಾಟ್ ವಿವರವನ್ನು ಯಾರೂ ಓದಲಾಗದು, ಹೊಸ ನೀತಿ ಕೇವಲ ಬ್ಯುಸಿನೆಸ್ ಸಂವಹನಕ್ಕೆ ಮಾತ್ರ ಅನ್ವಯವಾಗುತ್ತದೆ. ಗ್ರಾಹಕರಿಗೆ ನೀಡಿರುವ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ನೀತಿ ಹಾಗೆಯೇ ಮುಂದುವರಿಯಲಿದೆ ಎಂದು ಹೇಳಿದೆ.

ವಾಟ್ಸ್ ಆ್ಯಪ್, ಟೆಲಿಗ್ರಾಂ ಮತ್ತು ಸಿಗ್ನಲ್ ನಡುವಿನ ವ್ಯತ್ಯಾಸವೇನು ಮತ್ತು ಅದರಲ್ಲಿನ ವೈಶಿಷ್ಟ್ಯಗಳೇನು? ಇಲ್ಲಿದೆ ಮಾಹಿತಿ..

ADVERTISEMENT

ವಾಟ್ಸ್ ಆ್ಯಪ್

ಜನಸಾಮಾನ್ಯರಿಗೆ ವಾಟ್ಸ್ ಆ್ಯಪ್ ಹೊಸ ಖಾಸಗಿತನ ಮತ್ತು ಭದ್ರತಾ ನೀತಿಯ ಕುರಿತಾದ ಅಪ್‌ಡೇಟ್ ಅನ್ನು ಓದಿ ಅರ್ಥೈಸಿಕೊಳ್ಳುವುದು ಸುಲಭವಲ್ಲ. ಕಾರಣವೆಂದರೆ ಅದು ಸುದೀರ್ಘವಾಗಿದೆ ಮತ್ತು ಅಷ್ಟೊಂದು ತಾಳ್ಮೆಯಿಂದ ಓದುವಷ್ಟು ವ್ಯವಧಾನವೂ ಜನರಿಗೆ ಇರುವುದಿಲ್ಲ ಎನ್ನುವುದು. ಅಲ್ಲದೆ, ಪ್ರಾಂತೀಯ ಭಾಷೆಗಳಲ್ಲಿ ಮಾಹಿತಿ ಇಲ್ಲದಿರುವುದು ಕೂಡ ಅದನ್ನು ನಿರ್ಲಕ್ಷಿಸಲು ಮುಖ್ಯ ಕಾರಣವೆನ್ನಬಹುದು. ಆದರೆ ಅ್ಯಪಲ್, ಹೊಸದಾಗಿ ಅ್ಯಪ್ ಸ್ಟೋರ್ ಪ್ರೈವೆಸಿ ಚಾರ್ಟ್ ಅನ್ನು ಅ್ಯಪ್ ಸ್ಟೋರ್‌ನಲ್ಲಿ ಪ್ರಸ್ತುತಪಡಿಸಿದೆ. ಅದರಲ್ಲಿ ಹೊಸ ನೀತಿಯನ್ನು ಸರಳವಾಗಿ ತಿಳಿಸಲಾಗಿದೆ.

ಬಳಕೆದಾರರ ಯಾವೆಲ್ಲ ಮಾಹಿತಿಯನ್ನು ವಾಟ್ಸ್ ಆ್ಯಪ್ ಸಂಗ್ರಹಿಸುತ್ತದೆ ಎಂದು ಗಮನಿಸಿ..

ಖರೀದಿಯ ವಿವರ (ವಾಟ್ಸ್ ಆ್ಯಪ್ ಮೂಲಕ ನೀವು ಶಾಪಿಂಗ್ ಮಾಡಿದ್ದರೆ)

ಲೊಕೇಶನ್

ಕೋರ್ಸ್ ಲೊಕೇಶನ್

ಕಾಂಟಾಕ್ಟ್ ವಿವರ (ಇಮೇಲ್, ಫೋನ್ ನಂಬರ್)

ಬಳಕೆದಾರರ ಕಂಟೆಂಟ್

ಇತರ ಬಳಕೆದಾರರ ಕಂಟೆಂಟ್

ಯೂಸರ್ ಐಡಿ ಮತ್ತು ಡಿವೈಸ್ ಐಡಿ

ಬಳಕೆಯ ಮಾಹಿತಿ

ಉತ್ಪನ್ನದ ವಿವರ

ಜಾಹೀರಾತು ವಿವರ

ಬಳಕೆಯ ವಿವರ

ಕ್ರಾಶ್ ಡಾಟಾ

ಕಾರ್ಯನಿರ್ವಹಣೆ ಡಾಟಾ

ಇತರ ಡಯಾಗ್ನಸ್ಟಿಕ್ ಡಾಟಾ

ಪಾವತಿ-ಫೈನಾನ್ಶಿಯಲ್ ವಿವರ

ಹೀಗೆ ಪ್ರತಿಯೊಂದು ವಿವರವನ್ನು ವಾಟ್ಸ್ ಆ್ಯಪ್ ಪೂರ್ತಿಯಾಗಿ ಸಂಗ್ರಹಿಸುತ್ತದೆ, ಬಳಕೆದಾರರು ಇವುಗಳನ್ನು ಒಪ್ಪುವುದು ಅನಿವಾರ್ಯ.

ಟೆಲಿಗ್ರಾಂ

ರಷ್ಯಾ ಮೂಲದ ನಿಕೊಲಾಯ್ ಮತ್ತು ಪವಲ್ ಡುರೊವ್ ಸಹೋದರರು ಟೆಲಿಗ್ರಾಂ ಮೆಸೆಂಜರ್ ಅಭಿವೃದ್ಧಿಪಡಿಸಿದ್ದಾರೆ. ಇವು ಬಳಕೆದಾರರ ಅತ್ಯಲ್ಪ ವಿವರ ಸಂಗ್ರಹಿಸುತ್ತವೆ.

ಯೂಸರ್ ಐಡಿ (ಇಮೇಲ್ ಐಡಿ)

ಫೋನ್ ನಂಬರ್ (ಬಳಕೆದಾರರು ಮತ್ತು ಫೋನ್ ಕಾಂಟಾಕ್ಟ್ ಲಿಸ್ಟ್)

ಇದರಲ್ಲಿ ವಾಟ್ಸ್ ಆ್ಯಪ್ ರೀತಿಯಲ್ಲಿ ವಿವಿಧ ಫೀಚರ್ ಇಲ್ಲದಿದ್ದರೂ, ಹಲವು ಉತ್ತಮ ಅಂಶಗಳನ್ನು ಹೊಂದಿದೆ. ಒಂದು ಕಿರಿಕಿರಿಯೆಂದರೆ, ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿ ಯಾರಾದರೂ ಟೆಲಿಗ್ರಾಂ ಸೇರಿಕೊಂಡರೆ, ಸ್ವಯಂ ಆಗಿ ನಿಮಗೆ ಇಂತಹ ವ್ಯಕ್ತಿ ಟೆಲಿಗ್ರಾಂ ಸೇರಿದ್ದಾರೆ ಎಂಬ ನೋಟಿಫಿಕೇಶನ್ ಬರುತ್ತದೆ.

ಉಳಿದಂತೆ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಇಲ್ಲದಿದ್ದರೂ, ಸೀಕ್ರೆಟ್ ಮೆಸೇಜ್ ಎಂಬ ಆಯ್ಕೆ ಇದೆ. ಇದನ್ನು ಟೆಲಿಗ್ರಾಂ ನೋಡಲಾಗದು, ಕಳುಹಿಸಿದವರು ಮತ್ತು ಸ್ವೀಕರಿಸಿದವರು ಮಾತ್ರ ಓದಬಹುದು. ಕ್ಲೌಡ್ ಸ್ಟೋರೇಜ್ ಆಯ್ಕೆ ಇದೆ. ಒಮ್ಮೆಗೆ 2GB ಫೈಲ್ ಕಳುಹಿಸಬಹುದು.

ಸಿಗ್ನಲ್

ಪ್ರೈವೇಟ್ ಮೆಸೆಂಜರ್ ಎಂಬ ಹೆಸರಿನಿಂದ ಜನಪ್ರಿಯಗೊಂಡಿರುವ ಸಿಗ್ನಲ್, ಬಳಕೆದಾರರಿಗೆ ಹೊಸ ಫೀಚರ್‌ಗಳನ್ನು ನೀಡುತ್ತಿದೆ. ವಾಟ್ಸ್ ಆ್ಯಪ್ ಹೊಸ ನೀತಿಯ ಬಗ್ಗೆ ಅಸಮಾಧಾನ ಹೊಂದಿರುವವರು ಸಿಗ್ನಲ್ ಅ್ಯಪ್ ಅನ್ನು ಬಳಸುವಂತೆ ಕರೆನೀಡುತ್ತಿದ್ದಾರೆ. ವಾಟ್ಸ್ ಆ್ಯಪ್ ಅಪ್‌ಡೇಟ್ ಬಳಿಕ, ಸಿಗ್ನಲ್ ಡೌನ್‌ಲೋಡ್ ಮತ್ತು ಬಳಕೆದಾರರ ಸಂಖ್ಯೆ ಏರಿಕೆಯಾಗಿದೆ. ಖಾಸಗಿ ಸಂವಹನಕ್ಕೆ ಸಿಗ್ನಲ್ ಅ್ಯಪ್ ಬೆಸ್ಟ್. ವಾಟ್ಸ್ ಆ್ಯಪ್‌ನಲ್ಲಿರುವ ಬಹುತೇಕ ಫೀಚರ್ಸ್ ಇದರಲ್ಲೂ ಇದೆ. ಸಿಗ್ನಲ್ ಚಾಟ್ ಪೂರ್ತಿ‌ ಸುರಕ್ಷಿತ.

ಇದರಲ್ಲಿ ಕ್ಲೌಡ್ ಸ್ಟೋರೇಜ್ ಆಯ್ಕೆ ಇಲ್ಲ, ಹೀಗಾಗಿ ನೀವು ಫೋನ್ ಬದಲಾಯಿಸಿದರೆ, ಕಳೆದುಹೋದರೆ, ಚಾಟ್ ಮತ್ತು ಕಾಂಟಾಕ್ಟ್ ಕೂಡ ಕಳೆದುಹೋಗುತ್ತದೆ. ಡಾಟಾ ಸಿಂಕ್ ಮತ್ತು ಬ್ಯಾಕಪ್ ಆಯ್ಕೆ ಇಲ್ಲ ಎನ್ನುವುದೊಂದು ಸಮಸ್ಯೆ.


ಹೀಗೆ ಮೂರು ಪ್ರಮುಖ ಮತ್ತು ಟ್ರೆಂಡಿಂಗ್ ಅ್ಯಪ್ ಬಳಸಿದಾಗ, ಟೆಲಿಗ್ರಾಂ ಬೆಸ್ಟ್ ಎನ್ನಬಹುದು. ಯಾಕೆಂದರೆ, ಅದರಲ್ಲಿನ ಸೀಕ್ರೆಟ್ ಫೀಚರ್ ಹೆಚ್ಚು ಸುರಕ್ಷಿತ ಮತ್ತು 2GB ಫೈಲ್ ಅನ್ನು ಸುಲಭದಲ್ಲಿ ತ್ವರಿತವಾಗಿ ಶೇರ್ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.