ADVERTISEMENT

ಅವಮಾನದಿಂದ ಶಾಲೆ ಬಿಟ್ಟಿದ್ದ ಸಬಿತಾ ಈಗ ಕೊರಗ ಸಮುದಾಯದ ಮೊದಲ ಸಹಾಯಕ ಪ್ರಾಧ್ಯಾಪಕಿ!

ಪ್ರಜಾವಾಣಿ ವಿಶೇಷ
Published 16 ಏಪ್ರಿಲ್ 2025, 14:12 IST
Last Updated 16 ಏಪ್ರಿಲ್ 2025, 14:12 IST

ಜಾತಿಯ ಕಾರಣಕ್ಕೆ ಬಾಲ್ಯದಿಂದಲೂ ಹಲವು ಅವಮಾನಗಳನ್ನು ಎದುರಿಸಿದವರು ಉಡುಪಿ ಜಿಲ್ಲೆ ಗುಂಡ್ಮಿಯ ಸಬಿತಾ (Sabitha Gundmi). ಕೊರಗ ಸಮುದಾಯಕ್ಕೆ ಸೇರಿರುವ ಸಬಿತಾ, ಶಾಲೆಗಳಲ್ಲಿ ಅಸ್ಪೃಶ್ಯತೆ ಆಚರಣೆಯ ಕಾರಣಕ್ಕೆ ಪ್ರಾಥಮಿಕ ಶಿಕ್ಷಣವನ್ನೇ ತೊರೆಯಲು ನಿರ್ಧರಿಸಿದ್ದವರು. ಆದರೆ, ‘ಶಿಕ್ಷಣ’ದಿಂದ ಮಾತ್ರ ಈ ಎಲ್ಲ ಅವಮಾನಗಳನ್ನು ಮೀರಿ ನಿಲ್ಲಬಹುದು ಎಂದು ಅರಿತು ಓದು ಮುಂದುವರಿಸಿದರು. ಈಗ ಸಬಿತಾ, ಕೊರಗ ಸಮುದಾಯದ ಮೊದಲ ಸಹಾಯಕ ಪ್ರಾಧ್ಯಾಪಕಿ ಮತ್ತು ಈ ಸಮುದಾಮಯದಿಂದ ಪಿಎಚ್‌ಡಿ ಪದವಿ ಗಳಿಸಿದ ಮೊದಲ ಮಹಿಳೆ! ಸಬಿತಾ ಗುಂಡ್ಮಿಯವರ ಪ್ರೇರಣಾದಾಯಕ ಕಥನ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.