
ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡುವ ಆಚರಣೆಗಳಾದ ಕೇಕ್ ಹಾಗೂ ಸಿಹಿ ಹಂಚುವಿಕೆ, ಚರ್ಚ್‌ಗಳಿಗೆ ಭೇಟಿ, ಮಿನುಗುವ ಕ್ರಿಸ್‌ಮಸ್ ಮರಗಳ ಕೆಳಗೆ ಗಮನ ಸೆಳೆಯುವ ಉಡುಗೊರೆ ಜತೆ ‘ಸಿಕ್ರೇಟ್ ಸಾಂತಾ’ ಆಟವೂ ಪ್ರಾಮುಖ್ಯತೆ ಪಡೆದುಕೊಂಡಿದೆ.
ಕ್ರಿಸ್‌ಮಸ್ ಹಬ್ಬದ ಹೊತ್ತಿನಲ್ಲಿ ವಿದ್ಯಾರ್ಥಿಗಳು, ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಸಹೋದ್ಯೋಗಿಗಳ ನಡುವೆ ನಡೆಯುವ ಉಡುಗೊರೆ ವಿನಿಮಯ ಮಾಡಿಕೊಳ್ಳುವುದನ್ನು ‘ಸಿಕ್ರೇಟ್ ಸಾಂತಾ’ ಎನ್ನುತ್ತಾರೆ.
‘ಸಿಕ್ರೇಟ್ ಸಾಂತಾ’ ಚಟುವಟಿಕೆಯಲ್ಲಿ ಚೀಟಿಯಲ್ಲಿ ಬರೆದ ಹೆಸರುಗಳನ್ನು, ಉಳಿದ ಸದಸ್ಯರು ಒಂದೊಂದು ಚೀಟಿಯನ್ನು ಆಯ್ಕೆ ಮಾಡಿ, ಗೌಪ್ಯವಾಗಿ ಇಟ್ಟುಕೊಳ್ಳುತ್ತಾರೆ. ಚೀಟಿ ಆಯ್ಕೆ ಮಾಡಿಕೊಂಡ ಸದಸ್ಯರು ಚೀಟಿಯಲ್ಲಿನ ಹೆಸರಿನ ವ್ಯಕ್ತಿಗೆ ಸೂಕ್ತವಾಗುವ ಅಥವಾ ತಮ್ಮಿಷ್ಟದ ಆಗುವ ಉಡುಗೊರೆಯನ್ನು ನೀಡುತ್ತಾರೆ.
ಉಡುಗೊರೆಯ ಮೌಲ್ಯಕ್ಕಿಂತಲೂ ಅದರ ಹಿಂದೆ ಇರುವ ಪ್ರೀತಿ ‘ಸಿಕ್ರೇಟ್ ಸಾಂತಾ’ ಪ್ರಕ್ರಿಯೆಯಲ್ಲಿ ವ್ಯಕ್ತಗೊಳ್ಳುತ್ತದೆ ಎನ್ನಬಹುದು.
ಮನಸ್ತಾಪ, ಗಲಾಟೆ, ಜಗಳ ಕೊನೆಯಾಗಿ ಬಾಂಧವ್ಯ ಗಟ್ಟಿಯಾಗಿಸಿ, ವರ್ಷಾಂತ್ಯ ಸುಂದರ ನೆನಪಾಗಿ ಉಳಿಯಬೇಕೆಂದು ‘ಸಿಕ್ರೇಟ್ ಸಾಂತಾ’ ಆಚರಣೆಯ ಹಿಂದಿನ ಉದ್ದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.